Alvas Nudisiri

ನೋಂದಣಿ
ಆಮಂತ್ರಣ
ಸ್ಥಳ
ಗ್ಯಾಲರಿ
ಸಂಪರ್ಕ

ಪ್ರಕಟಣೆ

ಮನುಷ್ಯ ಧರ್ಮವನ್ನು ಉಳಿಸಬೇಕು: ರೇಖಾ ಕಾಖಂಡಕಿ

“ಪ್ರಸ್ತುತ ಇವತ್ತಿನ ಸ್ಥಿತಿಯಲ್ಲಿ ನಾವು ನಮ್ಮ ಸುತ್ತಲಿನ ಪರಿಸರ, ಪರಿಸ್ಥಿತಿ, ಸಂದರ್ಭಗಳನ್ನು ಕಂಡಾಗ ಯಾವುದೇ ಒಂದು ಕತ್ತಲಿನ ನೆರಳಿನಲ್ಲಿ ಬದುಕುತ್ತಿದ್ದೇವೆ ಎನಿಸುವಷ್ಟರ ಮಟ್ಟಿಗೆ,ಸಮಾಜದಲ್ಲಿ ದೌರ್ಜನ್ಯ, ಅನಾಚಾರಗಳು ನಡೆಯುತ್ತಿವೆ ಎಂದು ಕವಯಿತ್ರಿ ರೇಖಾ ಕಾಖಂಡಕಿ ಹೇಳಿದರು. ಆಳ್ವಾಸ್ ನುಡಿಸಿರಿಯ ಕವಿಸಮಯ-ಕವಿನಮನ ಕಾರ್ಯಕ್ರಮದಲ್ಲಿ `ಯಾರಿದ್ದರೂ ಮನೆಯಲ್ಲಿ ಮನವೆಂಬ ಗೂಡಿನಲ್ಲಿ’ ಎಂಬ ಕವನ ವಾಚಿಸಿ ಮಾತನಾಡಿದರು. ಕುಸಿಯುತ್ತಿರುವ ಸಾಮಾಜಿಕ ಮೌಲ್ಯಗಳು, ನಶಿಸುತ್ತಿರುವ ಕೌಟುಂಬಿಕ ಸಂಬಂಧಗಳು ಇವುಗಳನ್ನೆಲ್ಲಾ ನೋಡಿದಾಗ ನಮ್ಮೂಳಗಿದ್ದ ಕತ್ತಲನ್ನು ಹೊರಹಾಕಲು ಒಂದು ಬೆಳಕಿನ ದೀಪ ಬೇಕಿದೆ. ಆ ದೀಪವನ್ನು ಹಚ್ಚಿ […]

Read More

ನಂಬಿಕೆ ಮತ್ತು ವೈಚಾರಿಕತೆ ಒಂದೇ ನಾಣ್ಯದ ಎರಡು ಮುಖ: ಡಾ.ರಂಜಾನ್ ದರ್ಗಾ

ಮೂಡಬಿದಿರೆ: “ಉಪನಿಷತ್ತು, ವಚನ, ಬುದ್ಧ-ಮಹಾವೀರ ಮುಂತಾದ ಶ್ರೇಷ್ಠ ವಾಣಿಗಳನ್ನು ಯಾವ ಒಂದು ಧರ್ಮದ ಬಾಲಂಗೋಚಿಯಾಗಿಸುವುದು ಬೇಡ. ಅದು ಎಲ್ಲಾ ಧರ್ಮಗಳಿಗೂ ಸಲ್ಲುತ್ತದೆ” ಎಂದು ಹಿರಿಯ ಪತ್ರಕರ್ತ ಡಾ.ರಂಜಾನ್ ದರ್ಗಾ ಹೇಳಿದರು. ಆಳ್ವಾಸ್ ನುಡಿಸಿರಿಯ ಅಂಗವಾಗಿ ಭಾನುವಾರ ನಡೆದ ವಿಶೇಷೋಪನ್ಯಾಸ ಕಾರ್ಯಕ್ರಮದಲ್ಲಿ “ನಂಬಿಕೆ ಮತ್ತು ವೈಚಾರಿಕತೆ” ಎಂಬ ವಿಷಯದ ಕುರಿತು ಮಾತನಾಡಿದರು. “ನಂಬಿಕೆ ಮತ್ತು ವೈಚಾರಿತೆ ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಒಂದನ್ನು ಬಿಟ್ಟು ಮತ್ತೊಂದು ಮುನ್ನಡೆಯಲು ಸಾಧ್ಯವಿಲ್ಲ. ಅದನ್ನೇ ನಮ್ಮ ಶ್ರೇಷ್ಠ ಕೃತಿಗಳು ಸಾರುತ್ತವೆ. ನಂಬಿಕೆ ವೈಚಾರಿಕತೆಯ […]

Read More

ನುಡಿಸಿರಿಗೆ ಸೇರ್ಪಗೊಂಡ ಉದ್ಯೋಗಸಿರಿಯೆಂಬ ಗರಿ

ಮೂಡಬಿದಿರೆ, ಡಿ .03 :-ಉದ್ಯೋಗ ಸಿರಿ ನುಡಿಸಿರಿಗೆ ಸಿಕ್ಕ ಒಂದು ಗರಿ. ಇದು ಕೇವಲ ಮೂಡಬಿದಿರೆಗೆ ಸೀಮಿತವಾಗದೆ ಪ್ರತಿಯೊಂದು ರಾಜ್ಯದಲ್ಲಿ ನಡೆಯುವಂತಾಗಬೇಕು ಎಂದು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷ ಮುರುಳಿಧರ ಹಾಲಪ್ಪ ಅಭಿಪ್ರ್ರಾಯಪಟ್ಟರು. ಆಳ್ವಾಸ್ ನುಡಿಸಿರಿ-2017ರ ಪ್ರಯುಕ್ತ ಆಳ್ವಾಸ್ ಕಾಲೇಜಿನಲ್ಲಿ ಆಯೋಜಿಸಿದ್ದ ‘ಉದ್ಯೋಗ ಸಿರಿ’ ಉದ್ಘಾಟಿಸಿ ಅವರು ಮಾತನಾಡಿದರು. ಉದ್ಯೋಗ ಎಂಬುದು ಒಂದು ವಿನೂತನ ಮೈಲಿಗಲ್ಲು. ಒಂದು ತಾಯಿ ನೀಡುವ ಪ್ರೀತಿ ಮಮತೆಯನ್ನು ಯುವ ಪೀಳಿಗೆಗೆ ಆಳ್ವಾಸ್ ಶಿಕ್ಷಣ ಸಂಸ್ಥೆ ನೀಡುತ್ತಿದೆ. ಸಾವಿರಾರು ಜನ ನಿರುದ್ಯೋಗಿಗಳಿಗೆ ಡಾ.ಮೋಹನ್ […]

Read More

ಪ್ರತಿಭೆಯೊಂದಿಗೆ ವ್ಯುತ್ಪತ್ತಿಯನ್ನು ಬೆಳೆಸಿಕೊಂಡ ಯಕ್ಷ ಕಿನ್ನರ ಚಿಟ್ಟಾಣಿ – ವಿದ್ವಾನ್ ಡಾ.ಉಮಾಕಾಂತ್ ಭಟ್

ಮೂಡಬಿದಿರೆ, ಡಿ. 03 :- ‘ಪ್ರತಿಭಾನ್ವಿತ ಕಲಾವಿದರನ್ನು ವ್ಯುತ್ಪನ್ನ ಕಲಾವಿದರೆಂದು ಭಾವಿಸುವುದು ಕೇವಲ ಭ್ರಮೆ ಈ ಭ್ರಮಾಲೋಕವನ್ನು ಮುರಿದು ಪ್ರತಿಭೆಯ ಒಳಗೊಳಗೆ ವ್ಯುತ್ಪತ್ತಿಯನ್ನು ಬೆಳೆಸಿಕೊಂಡ ಅದ್ಭುತ ಮಿಂಚಿನ ಕಲಾವಿದ ಚಿಟ್ಟಾಣಿರಾಮಚಂದ್ರ’ ಎಂದು ವಿದ್ವಾನ್ ಡಾ.ಉಮಾಕಾಂತ್ ಭಟ್ ತಿಳಿಸಿದರು. ‘ಆಳ್ವಾಸ್ ನುಡಿಸಿರಿ-2017’ರ ಪ್ರಯುಕ್ತಆಳ್ವಾಸ್ ಕಾಲೇಜಿನ ರತ್ನಾಕರವರ್ಣಿ ವೇದಿಕೆಯಲ್ಲಿ ಆಯೋಜಿಸಿದ್ದ ಚಿಟ್ಟಾಣಿರಾಮಚಂದ್ರ ಹೆಗ್ಡೆಯವರ ಸಂಸ್ಮರಣೆಕಾರ್ಯಕ್ರಮದಲ್ಲಿ ಮಾತನಾಡಿದರು. ಚಿಟ್ಟಾಣಿಯವರದು ಮರೆಯಲಾಗದ ಮತ್ತು ಮರೆಯಬಾರದ ವ್ಯಕ್ತಿತ್ವ. ಇವರಲ್ಲಿ ಎದ್ದು ಕಾಣುವ ವೈಶಿಷ್ಟ್ಯತೆ ಎಂದರೆ ಬಿಡುವಿಲ್ಲದ ದುಡಿಮೆ ಮತ್ತು ಪ್ರೇಕ್ಷಕರನ್ನು ದಣಿವಿಲ್ಲದೆ ತಣಿಸುವ ಕೌಶಲ್ಯ. […]

Read More

ಅಪಸ್ವರದಿಂದಲೇ ಸ್ವರದ ಮಹತ್ವ ಗೊತ್ತಾಗುವುದು: ಸಂವಾದದಲ್ಲಿ ಡಾ.ಎಂ.ಮೋಹನ್ ಆಳ್ವ

ಸಂವಾದ ಕಾರ್ಯಕ್ರಮದಲ್ಲಿ ಬದುಕಿನ ಪುಟ ತೆರೆದಿಟ್ಟ ಸಂಸ್ಕøತಿಯ ಹರಿಕಾರ ಮೂಡುಬಿದಿರೆ, ಡಿ.3: `ಬಹುತ್ವದ ಪರಿಕಲ್ಪನೆ ಯಾವಾಗಲೂ ನನ್ನ ಆಸಕ್ತಿಯ ವಿಷಯ. ನಮ್ಮ ದೊಡ್ಡ ಜೀವನ ಬಹುತ್ವದ ನೆಲೆಯಲ್ಲಿ ಬರಬೇಕು ಎಂಬ ಆಸೆ ಇಟ್ಟುಕೊಂಡವನು ನಾನು. ಜೀವನದ ಅವಿಭಾಜ್ಯ ಅಂಗವಾಗಿ ಈ ವೈವಿಧ್ಯತೆ ಯಾವಾಗಲೂ ಇರಬೇಕು. ಅದಕ್ಕಾಗಿಯೇ ಈ ಬಾರಿಯ ನುಡಿಸಿರಿಯನ್ನು ಬಹುತ್ವದ ಪರಿಕಲ್ಪನೆಯಲ್ಲಿ ಮಾಡುತ್ತಿದ್ದೇವೆ’ ಎಂದು ಆಳ್ವಾಸ್ ನುಡಿಸಿರಿಯ ಕಾರ್ಯಾಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಹೇಳಿದರು. ಆಳ್ವಾಸ್ ನುಡಿಸಿರಿಯ ಮೂರನೇ ದಿನ ಡಾ.ವಿ.ಎಸ್. ಆಚಾರ್ಯ ಸಭಾಭವನದಲ್ಲಿ ನಡೆದ […]

Read More

ಜೀವನೋಪಾಯ ರೂಪಿಸಿದ ಮೀನುಗಳ ಚಿತ್ತಾರಜೀವನೋಪಾಯ ರೂಪಿಸಿದ ಮೀನುಗಳ ಚಿತ್ತಾರ

ಮೂಡಬಿದ್ರಿ ಡಿ.1: ಬಣ್ಣ ಬಣ್ಣದ ಮೀನುಗಳು. ಕಡುಗಪ್ಪು, ಗುಲಾಬಿ ಕೆಂಪು ಮತ್ತೊಂದಷ್ಟು ಮನುಷ್ಯನ ತರ್ಕಕ್ಕೆ ನಿಲುಕದ ವಿಭಿನ್ನ ಬಣ್ಣಗಳನ್ನು ಮೈದುಂಬಿಕೊಂಡ ಮೀನುಗಳು ನೋಡುಗರ ಮನಸೂರೆಗೊಳ್ಳುತ್ತಿದೆ. ವಿಶಿಷ್ಟ, ವಿಚಿತ್ರ ಬಣ್ಣಗಳ ಅನಾವರಣವಾಗಿದ್ದು ‘ಆಳ್ವಾಸ್ ನುಡಿಸಿರಿ-2017’ರ ಮತ್ಸ್ಯ ಪ್ರದರ್ಶನದಲ್ಲಿ. ಈ ಪರಿಸರ ಸ್ನೇಹಿ ಮೀನು ರಕ್ಷಣಾ ಕೇಂದ್ರ ಎಲ್ಲರ ಗಮನ ಸೆಳೆಯಿತು. ಬಾಲ್ಯದಿಂದಲೇ ಮೀನು ಸಾಕುವ ಹವ್ಯಾಸ ರೂಢಿಸಿಕೊಂಡಿದ್ದ ಕಾರ್ತಿಕ ಇದೀಗ ಅದನ್ನು ಉದ್ಯೋಗವಾಗಿ ಮಾರ್ಪಾಡಾಗಿಸಿಕೊಂಡಿದ್ದಾನೆ. ಈ ಮೀನುಗಳ ಸಂರಕ್ಷಣೆಗೆ ವಿಶೇಷ ಕಾಳಜಿ ವಹಿಸಲಾಗುತ್ತದೆ. ಮುಖ್ಯವಾಗಿ ಮರೈನ್ ಫಿಶ್ (ಉಪ್ಪು ನೀರಿನ […]

Read More

ಜೀವನೋಪಾಯ ರೂಪಿಸಿದ ಮೀನುಗಳ ಚಿತ್ತಾರ

ಮೂಡಬಿದ್ರಿ ಡಿ.1: ಬಣ್ಣ ಬಣ್ಣದ ಮೀನುಗಳು. ಕಡುಗಪ್ಪು, ಗುಲಾಬಿ ಕೆಂಪು ಮತ್ತೊಂದಷ್ಟು ಮನುಷ್ಯನ ತರ್ಕಕ್ಕೆ ನಿಲುಕದ ವಿಭಿನ್ನ ಬಣ್ಣಗಳನ್ನು ಮೈದುಂಬಿಕೊಂಡ ಮೀನುಗಳು ನೋಡುಗರ ಮನಸೂರೆಗೊಳ್ಳುತ್ತಿದೆ. ವಿಶಿಷ್ಟ, ವಿಚಿತ್ರ ಬಣ್ಣಗಳ ಅನಾವರಣವಾಗಿದ್ದು ‘ಆಳ್ವಾಸ್ ನುಡಿಸಿರಿ-2017’ರ ಮತ್ಸ್ಯ ಪ್ರದರ್ಶನದಲ್ಲಿ. ಈ ಪರಿಸರ ಸ್ನೇಹಿ ಮೀನು ರಕ್ಷಣಾ ಕೇಂದ್ರ ಎಲ್ಲರ ಗಮನ ಸೆಳೆಯಿತು. ಮೂಡಬಿದ್ರಿ ಡಿ.1: ಬಣ್ಣ ಬಣ್ಣದ ಮೀನುಗಳು. ಕಡುಗಪ್ಪು, ಗುಲಾಬಿ ಕೆಂಪು ಮತ್ತೊಂದಷ್ಟು ಮನುಷ್ಯನ ತರ್ಕಕ್ಕೆ ನಿಲುಕದ ವಿಭಿನ್ನ ಬಣ್ಣಗಳನ್ನು ಮೈದುಂಬಿಕೊಂಡ ಮೀನುಗಳು ನೋಡುಗರ ಮನಸೂರೆಗೊಳ್ಳುತ್ತಿದೆ. ವಿಶಿಷ್ಟ, ವಿಚಿತ್ರ ಬಣ್ಣಗಳ […]

Read More

ತಾಯಿ ಸಾಕುವವರೂ ಸಮಾಜಕ್ಕೆ ಬೇಕು : ಪ್ರೊ. ಎಚ್. ರಮೇಶ್ ಕೆದಿಲಾಯ

“ತಾಯಿ ಸಾಕುವವರೂ ಬೇಕಲ್ಲ, ನಮಗೆ ನಿಮಗೆ ಈ ಸಮಾಜಕ್ಕೆ” ಎಂಬ ಒಂದು ವಾಕ್ಯಕ್ಕೆ ಸಿಡಿದ ಚಪ್ಪಾಳೆಗಳು ಅವರ ಮಾತುಗಳು ಜನರ ಮನಸ್ಸಿಗೆ ನಾಟಿತೆಂಬುವುದಕ್ಕೆ ಸಾಕ್ಷಿಯಾಗಿತ್ತು. ಆಳ್ವಾಸ್ ನುಡಿಸಿರಿ 2017ರ ಕವಿನಮನ ಕಾರ್ಯಕ್ರಮದಲ್ಲಿ ಪ್ರೊ. ಎಚ್. ರಮೇಶ್ ಕೆದಿಲಾಯ ಅವರ ‘ನಾಯಿ ಸಾಕುತ್ತಾರೆ’ ಎಂಬ ಕವನ ವಾಚನಕ್ಕೆ ಸಿಕ್ಕ ಪ್ರತಿಕ್ರಿಯೆ ಹೀಗಿತ್ತು. “ಅಕಾಲದಲ್ಲಿ ಅಂಧನಾದ ವ್ಯಕ್ತಿಗೆ ಎರಡು ರೀತಿಯ ಜನರು ನೆನಪಿರುತ್ತಾರೆ. ಒಂದು ಮುಖವಿರುವವರು ಅಂದರೆ ದೃಷ್ಟಿ ಇದ್ದಾಗ ಕಂಡ ಮುಖಗಳು, ಮತ್ತೊಂದು ಮುಖವಿಲ್ಲದವರು, ಆತ ಅಂಧನಾದ ಮೇಲೆ […]

Read More

`ಸತ್ಯವನ್ನು ಉತ್ಪಾದಿಸುತ್ತಿರುವ ಮಾಧ್ಯಮಗಳು ಸ್ವವಿಮರ್ಶೆ ಮಾಡಿಕೊಳ್ಳಬೇಕು’ ನುಡಿಸಿರಿ ವಿಚಾರಗೋಷ್ಠಿಯಲ್ಲಿ ತಜ್ಞರ ಒಕ್ಕೊರಲ ಅಭಿಪ್ರಾಯ

ಮೂಡುಬಿದಿರೆ: ಆಳ್ವಾಸ್ ನುಡಿಸಿರಿ 2017 ರ ಎರಡನೇ ದಿನದ ವಿಶೇಷ ವಿಚಾರ ಗೋಷ್ಠಿಯು ಶನಿವಾರ ಕಾಲೇಜಿನ ರತ್ನಾಕರ ವರ್ಣಿ ವೇದಿಕೆಯಲ್ಲಿ ಜರುಗಿತು. “ಮಾಧ್ಯಮ-ಸ್ವವಿಮರ್ಶೆಯ ನೆಲೆ” ವಿಚಾರದಡಿ ಮಾಧ್ಯಮದ ಮೂರು ಪ್ರಧಾನ ಆಯಾಮಗಳಾದ ಸಾಮಾಜಿಕ ಜಾಲತಾಣ, ಪತ್ರಿಕಾ ರಂಗ ಹಾಗು ದೃಶ್ಯ ಮಾಧ್ಯಮಗಳ ಕುರಿತು ಚರ್ಚೆ ನಡೆಯಿತು. ದೃಶ್ಯ ಮಾಧ್ಯಮಗಳ ಬಗ್ಗೆ ತುಮಕೂರು ವಿವಿಯ ಪ್ರಾಧ್ಯಾಪಕ ಡಾ. ನಿತ್ಯಾನಂದ ಶೆಟ್ಟಿ ಪ್ರಚಲಿತ ಉದಾಹರಣೆಗಳನ್ನು ನೀಡಿ “ಮಾಧ್ಯಮಗಳಿಗೆ ಸ್ವವಿಮರ್ಶೆಯ” ಅವಶ್ಯಕತೆಯ ಕುರಿತು ಮಾತನಾಡಿದರು. “ದೃಶ್ಯ ಮಾಧ್ಯಮ ಉಳಿದ ಮಾಧ್ಯಮಗಳಿಗಿಂತ ದೊಡ್ಡ […]

Read More

ನುಡಿಸಿರಿಯಲ್ಲಿ ತೆರೆದುಕೊಂಡ ಕುಬ್ಜ ಮರಗಳ ವಿಶಾಲ ಸಾಮ್ರಾಜ್

ಮೂಡಬಿದ್ರಿ ಡಿ.1 : ಹೋದಲ್ಲೆಲ್ಲಾ ಗಿಡ ಹುಡುಕುವ ಅಲೆಮಾರಿ, ಹಸಿರಿನಲ್ಲಿ ಕಲೆ ಕಾಣುವ ಕಲಾವಿದ, ಬೋನ್ಸಾಯ್ ಗಿಡಗಳನ್ನು ಕಲೆ ಹಾಕುವ ಚಾಳಿಯಲ್ಲಿ ಬದುಕು ಕಂಡುಕೊಂಡ ಹೈದ್ರಾಬಾದ್‍ನ ಗೋವಿಂದ ರಾಜ್, ಕುಬ್ಜ ಮರಗಳ ಸಂಗ್ರಹಗಾರ. 30 ವರ್ಷಗಳಿಂದ ಬೋನ್ಸಾಯ್ ಮರಗಳನ್ನು ಬೆಳೆಸುವ ಇವರು ಹೋದಲ್ಲೆಲ್ಲಾ ಹೊಸ ಗಿಡಗಳ ಹುಡುಕಾಟದಲ್ಲಿರುತ್ತಾರಂತೆ. ಭಾರತದ ಹಿರಿಯ ಬೋನ್ಸಾಯ್ ಸಂಗ್ರಹಕಾರರಲ್ಲಿ ಒಬ್ಬರಾದ ಇವರು 30 ವರ್ಷಗಳಿಂದ ಇದರ ಕಲಿಕೆ ಹಾಗು ಜ್ಞಾನವನ್ನು ಆಸಕ್ತರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಈ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಇಚ್ಚಿಸುವವರಿಗೆ ತರಬೇತಿ ಮತ್ತು ಕೋರ್ಸ್‍ಗಳನ್ನು […]

Read More