Alvas Nudisiri

ನೋಂದಣಿ
ಆಮಂತ್ರಣ
ಸ್ಥಳ
ಗ್ಯಾಲರಿ
ಸಂಪರ್ಕ
ಆಳ್ವಾಸ್ ನುಡಿಸಿರಿ > ಮಾಧ್ಯಮ > ಪ್ರಕಟಣೆ > ‘ಆಳ್ವಾಸ್ ವಿದ್ಯಾರ್ಥಿಸಿರಿ ಉದ್ಘಾಟನೆಗೆ ಪಿ. ಶೇಷಾದ್ರಿ

‘ಆಳ್ವಾಸ್ ವಿದ್ಯಾರ್ಥಿಸಿರಿ ಉದ್ಘಾಟನೆಗೆ ಪಿ. ಶೇಷಾದ್ರಿ

P.Sheshadriಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ ವಿದ್ಯಾರ್ಥಿ ಸಾಹಿತ್ಯ – ಸಂಸ್ಕøತಿ ಸಮ್ಮೇಳನ ‘ಆಳ್ವಾಸ್ ವಿದ್ಯಾರ್ಥಿಸಿರಿ 2015’ ಸಮ್ಮೇಳನವನ್ನು ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಉದ್ಘಾಟಿಸಲಿದ್ದಾರೆ. ಸಮ್ಮೇಳನವು ನವಂಬರ 26, ಗುರುವಾರದಂದು ವಿದ್ಯಾಗಿರಿಯ ರತ್ನಾಕರವರ್ಣಿ ವೇದಿಕೆಯಲ್ಲಿ ನಡೆಯಲಿದೆ. ಬೆಳಗ್ಗೆ 9.30 ರಿಂದ ನಡೆಯುವ ಉದ್ಘಾಟನ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷೆ ಕು.ಶಾಲಿಕಾ ಎಕ್ಕಾರು ಆಶಯ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಮೂವರು ಸಾಧಕರಿಗೆ ‘ಆಳ್ವಾಸ್ ವಿದ್ಯಾರ್ಥಿ ಸಿರಿ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ ಮೋಹನ ಆಳ್ವ ತಿಳಿಸಿದರು.
ಸಮ್ಮೇಳನದಲ್ಲಿ ವಿದ್ಯಾರ್ಥಿ ವಿಶೇಷೋಪನ್ಯಾಸದಲ್ಲಿ ಶ್ರದ್ಧಾ ಎನ್ ಪೈವಳಿಕೆ ‘ಕನ್ನಡ ಹಾಡುಗಬ್ಬ’ ಎಂಬ ವಿಷಯದಲ್ಲಿ, ಸೌಮ್ಯ ಸರಗಣಾಚಾರಿ ಗುಲ್ಬರ್ಗಾ ಇವರು ‘ಯುವಜನತೆ ಮತ್ತು ಭಾರತ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಲಿದ್ದಾರೆ. ಹಿರಿಯರಿಂದ ವಿಶೇಷೋಪನ್ಯಾಸದಲ್ಲಿ ಮಕ್ಕಳ ಸಾಹಿತಿ ಟಿ.ಎಸ್ ನಾಗರಾಜ ಶೆಟ್ಟಿ,ತಿಪಟೂರು ಹಾಗೂ ರಾಷ್ಟ್ರೀಯ ತರಬೇತುದಾರ ಶಿಕ್ಷಕ ರಾಜೇಂದ್ರ ಭಟ್ ಕೆ ಉಪನ್ಯಾಸ ನೀಡಲಿದ್ದಾರೆ.
ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸುಶ್ಮಿತಾ ಕೆ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದ್ದು ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯ ಆಯ್ದ ವಿದ್ಯಾರ್ಥಿ ಕವಿಗಳು ಭಾಗವಹಿಸಲಿದ್ದಾರೆ. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಅಭಿನಯ ಗೀತೆ ಗೋಷ್ಠಿ ನಡೆಯಲಿದೆ.
ಸಮ್ಮೇಳನದ ನಡುವೆ ವಿಶೇಷ ಪ್ರತಿಭೆಗಳಿಂದ ಪ್ರತಿಭಾ ಪ್ರದರ್ಶನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಿವೆ. ಪೈವಳಿಕೆಯ ಸರಕಾರಿ ಪ್ರೌಢಶಾಲೆಯ ತೇಜಸ್ವಿನಿ ಇವರಿಂದ ಡ್ಯಾನ್ಸ್ ವಿದ್ ಮ್ಯಾಜಿಕ್, ಆಳ್ವಾಸ್ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಮನುಜ ನೇಹಿಗ ಸುಳ್ಯ ಇವರಿಂದ ಕಥಾಭಿನಯ, ಮಂಗಳೂರಿನ ಸಾವಿತ್ರಿ ಎಸ್ ರಾವ್ ಸಂಯೋಜಿಸಿ, ಚಂದ್ರಶೇಖರ ನಾವಡ ನಿರ್ದೇಶನದ ವಿದ್ಯಾದಾಯಿನಿ ಹೈಸ್ಕೂಲ್ ವಿದ್ಯಾರ್ಥಿಗಳಿಂದ ಕಾವ್ಯ-ನÀೃತ್ಯ- ಗಾನ – ಕುಂಚ ಕಾರ್ಯಕ್ರಮ, ಶಾರದಾ ಪದವಿ ಪೂರ್ವ ಕಾಲೇಜು ಮಂಗಳೂರು, ಎಸ್ ಡಿ ಎಂ ಆಗ್ಲ ಮಾಧ್ಯಮ ಶಾಲೆ ಧರ್ಮಸ್ಥಳ, ಶ್ರೀ ದುರ್ಗಾಪರಮೇಶ್ವರಿ ಪದವಿ ಪೂರ್ವ ಕಾಲೇಜು ಕಟೀಲು, ಆಳ್ವಾಸ್ ಪ್ರೌಢಶಾಲೆಗಳಿಂದ ಹಾಗೂ ಹೆಜ್ಜೆ ಗೆಜ್ಜೆ ತಂಡ ಮಂಗಳೂರು ಇವರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ. ಎಚ್ ಯಜ್ಞೇಶ್ ಸುರತ್ಕಲ್ ಇವರ ನಿರ್ಧೇಶನದಲ್ಲಿ ವಿದ್ಯಾದಾಯಿನಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಸಂಪತ್ ಎಸ್ ಡಿ ಹಾಗೂ ಹಪ್ಸಾ ಉಮೈರಾ ಇವರಿಂದ ಕೃಷ್ಣ- ಕರ್ಣ ಸಂವಾದ ಎಂಬ ಗಮಕ ವ್ಯಾಖ್ಯಾನ ಕಾರ್ಯಕ್ರಮ ನಡೆಯಲಿದೆ.
ಸಂಜೆ 4 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಎಸ್ ಡಿ ಎಂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ರಾಹುಲ್ ಎಸ್ ಎಂ ಸಮಾರೋಪ ಭಾಷಣ ಮಾಡಲಿದ್ದಾರೆ. ಇದಲ್ಲದೇ ವಿವಿಧ ಶಾಲೆಯ ವಿದ್ಯಾರ್ಥಿಗಳು ಗಾದೆ, ಒಗಟು, ವಚನ ಪ್ರಸ್ತುತಿ ಹಾಗೂ ಕಾರ್ಯಕ್ರಮದ ಸ್ವಾಗತ ವಂದನೆ ನಿರೂಪಣೆ ಎಲ್ಲವನ್ನೂ ವಿದ್ಯಾರ್ಥಿಗಳೇ ನಿರ್ವಹಿಸಲಿದ್ದಾರೆ. ಈ ಸಮ್ಮೇಳನಕ್ಕೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಡಾ. ಎಂ ಮೋಹನ ಆಳ್ವರು ತಿಳಿಸಿದ್ದಾರೆ.

ನವಂಬರ 26 ರಂದು ಬೆಳಗ್ಗೆ 9.30ಕ್ಕೆ ವಿದ್ಯಾರ್ಥಿಸಿರಿಯ ಉದ್ಘಾಟನೆಗಿಂತ ಮೊದಲು ನಾಡೋಜ ಹಂಪ ನಾಗರಾಜಯ್ಯ ಮತ್ತು ಡಾ.ಕಮಲಾ ಹಂಪನಾ ಇವರು ಆಳ್ವಾಸ್ ನುಡಿಸಿರಿ ಧ್ವಜಾರೋಹಣವನ್ನು ಮಾಡಲಿದ್ದಾರೆ.

ಡಾ.ಎಂ ಮೋಹನ ಆಳ್ವ