Alvas Nudisiri

ನೋಂದಣಿ
ಆಮಂತ್ರಣ
ಸ್ಥಳ
ಗ್ಯಾಲರಿ
ಸಂಪರ್ಕ
ಆಳ್ವಾಸ್ ನುಡಿಸಿರಿ > ಮಾಧ್ಯಮ > ಪ್ರಕಟಣೆ > ಜೀವನೋಪಾಯ ರೂಪಿಸಿದ ಮೀನುಗಳ ಚಿತ್ತಾರ

ಜೀವನೋಪಾಯ ರೂಪಿಸಿದ ಮೀನುಗಳ ಚಿತ್ತಾರ

ಮೂಡಬಿದ್ರಿ ಡಿ.1: ಬಣ್ಣ ಬಣ್ಣದ ಮೀನುಗಳು. ಕಡುಗಪ್ಪು, ಗುಲಾಬಿ ಕೆಂಪು ಮತ್ತೊಂದಷ್ಟು ಮನುಷ್ಯನ ತರ್ಕಕ್ಕೆ ನಿಲುಕದ ವಿಭಿನ್ನ ಬಣ್ಣಗಳನ್ನು ಮೈದುಂಬಿಕೊಂಡ ಮೀನುಗಳು ನೋಡುಗರ ಮನಸೂರೆಗೊಳ್ಳುತ್ತಿದೆ. ವಿಶಿಷ್ಟ, ವಿಚಿತ್ರ ಬಣ್ಣಗಳ ಅನಾವರಣವಾಗಿದ್ದು ‘ಆಳ್ವಾಸ್ ನುಡಿಸಿರಿ-2017’ರ ಮತ್ಸ್ಯ ಪ್ರದರ್ಶನದಲ್ಲಿ. ಈ ಪರಿಸರ ಸ್ನೇಹಿ ಮೀನು ರಕ್ಷಣಾ ಕೇಂದ್ರ ಎಲ್ಲರ ಗಮನ ಸೆಳೆಯಿತು. ಮೂಡಬಿದ್ರಿ ಡಿ.1: ಬಣ್ಣ ಬಣ್ಣದ ಮೀನುಗಳು. ಕಡುಗಪ್ಪು, ಗುಲಾಬಿ ಕೆಂಪು ಮತ್ತೊಂದಷ್ಟು ಮನುಷ್ಯನ ತರ್ಕಕ್ಕೆ ನಿಲುಕದ ವಿಭಿನ್ನ ಬಣ್ಣಗಳನ್ನು ಮೈದುಂಬಿಕೊಂಡ ಮೀನುಗಳು ನೋಡುಗರ ಮನಸೂರೆಗೊಳ್ಳುತ್ತಿದೆ. ವಿಶಿಷ್ಟ, ವಿಚಿತ್ರ ಬಣ್ಣಗಳ ಅನಾವರಣವಾಗಿದ್ದು ‘ಆಳ್ವಾಸ್ ನುಡಿಸಿರಿ-2017’ರ ಮತ್ಸ್ಯ ಪ್ರದರ್ಶನದಲ್ಲಿ. ಈ ಪರಿಸರ ಸ್ನೇಹಿ ಮೀನು ರಕ್ಷಣಾ ಕೇಂದ್ರ ಎಲ್ಲರ ಗಮನ ಸೆಳೆಯಿತು. ಬಾಲ್ಯದಿಂದಲೇ ಮೀನು ಸಾಕುವ ಹವ್ಯಾಸ ರೂಢಿಸಿಕೊಂಡಿದ್ದ ಕಾರ್ತಿಕ ಇದೀಗ ಅದನ್ನು ಉದ್ಯೋಗವಾಗಿ ಮಾರ್ಪಾಡಾಗಿಸಿಕೊಂಡಿದ್ದಾನೆ. ಈ ಮೀನುಗಳ ಸಂರಕ್ಷಣೆಗೆ ವಿಶೇಷ ಕಾಳಜಿ ವಹಿಸಲಾಗುತ್ತದೆ. ಮುಖ್ಯವಾಗಿ ಮರೈನ್ ಫಿಶ್ (ಉಪ್ಪು ನೀರಿನ ಮೀನುಗಳು)ಗಳನ್ನು ಪೋಷಣೆ ಮಾಡಲು ವಿಶೇಷ ಮುತುವರ್ಜಿ ವಹಿಸಿಕೊಂಡು ಸಾಕಾಣೆ ಮಾಡಲಾಗುತ್ತದೆ ಎಂದು ಕ್ಯಾಶೆಕ್ವಾ ಸಂಸ್ಥೆಯ ಸದಸ್ಯ ಕಾರ್ತಿಕ್ ಹೇಳಿದರು. ಕ್ಯಾಶೆಕ್ವಾ ಸಂಸ್ಥೆಯು ಆಳ್ವಾಸ್ ಕಾಲೇಜು ಆವರಣದಲ್ಲಿ ಮತ್ಸ್ಯ ಪ್ರದರ್ಶನವನ್ನು ಹಮ್ಮಿಕೊಂಡಿದೆ. ಇವರು ದೇಶದಾದ್ಯಂತ ಸುಮಾರು 50ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ. ಎಕ್ವಾನ, ಥಾರ್, ಕ್ರೇಫಿಶ್, ಕ್ರ್ಯಾಬ್, ಲಾಬ್‍ಸ್ಟಾರ್, ಮರೈನ್ ಫಿಶ್ ಹೀಗೆ ಹಲವಾರು ಜಾತಿಯ ಮೀನುಗಳು ಪ್ರದರ್ಶನದಲ್ಲಿ ಜನರನ್ನು ತನ್ನೆಡೆಗೆ ಸೆಳೆಯುತ್ತಿವೆ.ಮೀನು ಸಾಕಾಣೆ ವಿಷಯದಲ್ಲಿ ಆಸಕ್ತಿ ಹೊಂದಿರುವ ಯುವಕರಿಗೆ 3ರಿಂದ 4 ತಿಂಗಳ ಕಾಲ ತರಬೇತಿ ನೀಡಲಾಗುತ್ತದೆ. ತರಬೇತಿಯಲ್ಲಿ ಮೀನುಗಳ ಪೋಷಣೆ ಮತ್ತು ನೀರಿನ ಗುಣಮಟ್ಟದ ಬಗ್ಗೆ ತಿಳಿಸಿಕೊಡಲಾಗುತ್ತದೆ. ಜೀವಶಾಸ್ತ್ರ ವಿದ್ಯಾರ್ಥಿಗಳು ಮತ್ಸ್ಯ ಸಾಕಾಣೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತರುವುದು ಸಂತಸದ ವಿಷಯ.  ಜೀವಶಾಸ್ತ್ರದ ವಿದ್ಯಾರ್ಥಿಗಳಿಗೆ ತರಬೇತಿ ಕೊಡುವುದು ಸುಲಭ. ಮೀನುಸಾಕಾಣೆ ಮಾಡುವುದಕ್ಕೂ ಮುನ್ನ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕಾಗಿರುತ್ತದೆ. ಮೀನುಗಳಿಗೆ ನೀಡುವ ಆಹಾರದ ದಿನಕ್ಕೆ ಕೇವಲ ಒಂದು ಬಾರಿ ನೀಡುವುದರಿಂದ ಮೀನುಗಳನ್ನು ಆರೋಗ್ಯವಾಗಿ ಕಾಪಾಡಿಕೊಳ್ಳಬಹುದು. ಹಾಗೆಯೇ ಮೀನುಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಕಮ್ಯುನಿಟಿ ಟ್ಯಾಂಕ್‍ಗಳನ್ನು ಬಳಕೆ ಮಾಡಲಾಗುತ್ತದೆ. ಈ ಎಲ್ಲಾ ಸಂಗತಿಗಳು ವಿಜ್ಞಾನದ ವಿದ್ಯಾಥಿಗಳಿಗೆ ಬೇಗನೆ ತಿಳಿಯುತ್ತದೆ ಎಂದರು.ಪ್ರದರ್ಶನಗೊಳ್ಳುವ ಪ್ರತಿಯೊಂದು ಸ್ಥಳಗಳಿಗೂ ಸಂಸ್ಥೆಯ ಸದಸ್ಯರು ಭೇಟಿ ನೀಡಿ, ಅಲ್ಲಿನ ಜನರ ಮೀನು ಸಾಕಾಣಿಕೆಯ ಸಂಬಂಧಿತ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ. ಖಾಸಗಿ ಪ್ರದರ್ಶನಗಳನ್ನು ಸಹ ಆಯೋಜಿಸಲಾಗುತ್ತದೆ.ಮೀನುಗಾರಿಕೆ ಇಲಾಖೆಯಿಂದ ಸಹಾಯಧನದ ಸೌಲಭ್ಯ ಪಡೆದುಕೊಳ್ಳುತ್ತದ್ದೇವೆ. ಈ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲು ಸರಕಾರವು ಯೋಜನೆಗಳನ್ನು ರೂಪಿಸುತ್ತಿದೆ. ಮೀನು ಸಾಕಾಣೆಯ ಬಗೆಗೆ ಜನರು ಹೊಂದಿರುವ ಕಾಳಜಿ ಹಾಗೂ ಆಸಕ್ತಿ ನಮ್ಮನ್ನು ಪ್ರೇರೇಪಿಸುತ್ತದೆ. ಹಾಗಾಗಿಯೇ ದೊಡ್ಡ ಮೊತ್ತದ ಅಕ್ವೇರಿಯಂಗಳನ್ನು ಖರೀದಿಸುವ ಜನರು ಹೆಚ್ಚಾಗಿದ್ದು ಅವರ ಮನೆಗಳಲ್ಲಿ ಆಕ್ವಾಸ್ಕೇಪಿಂಗ್ ಮಾಡಲು ಮುಂದಾಗುತ್ತಿದ್ದಾರೆ. ಪ್ರತಿಷ್ಟೆಗಾದರೂ ಸರಿ, ಜನರು ಮೀನು ಸಾಕಾಣೆ ಬಗ್ಗೆ ಒಲವು ತೋರುತ್ತಿರುವುದು ಖುಷಿ ವಿಚಾರ.
ಭವಿಷ್ಯ ಶೆಟ್ಟಿ ಎಸ್.ಡಿ.ಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಉಜಿರೆ.