Alvas Nudisiri

ನೋಂದಣಿ
ಆಮಂತ್ರಣ
ಸ್ಥಳ
ಗ್ಯಾಲರಿ
ಸಂಪರ್ಕ
ಆಳ್ವಾಸ್ ನುಡಿಸಿರಿ > ಮಾಧ್ಯಮ > ಪ್ರಕಟಣೆ > ನುಡಿಸಿರಿಗೆ ಸೇರ್ಪಗೊಂಡ ಉದ್ಯೋಗಸಿರಿಯೆಂಬ ಗರಿ

ನುಡಿಸಿರಿಗೆ ಸೇರ್ಪಗೊಂಡ ಉದ್ಯೋಗಸಿರಿಯೆಂಬ ಗರಿ

ಮೂಡಬಿದಿರೆ, ಡಿ .03 :-ಉದ್ಯೋಗ ಸಿರಿ ನುಡಿಸಿರಿಗೆ ಸಿಕ್ಕ ಒಂದು ಗರಿ. ಇದು ಕೇವಲ ಮೂಡಬಿದಿರೆಗೆ ಸೀಮಿತವಾಗದೆ ಪ್ರತಿಯೊಂದು ರಾಜ್ಯದಲ್ಲಿ ನಡೆಯುವಂತಾಗಬೇಕು ಎಂದು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷ ಮುರುಳಿಧರ ಹಾಲಪ್ಪ ಅಭಿಪ್ರ್ರಾಯಪಟ್ಟರು.
ಆಳ್ವಾಸ್ ನುಡಿಸಿರಿ-2017ರ ಪ್ರಯುಕ್ತ ಆಳ್ವಾಸ್ ಕಾಲೇಜಿನಲ್ಲಿ ಆಯೋಜಿಸಿದ್ದ ‘ಉದ್ಯೋಗ ಸಿರಿ’ ಉದ್ಘಾಟಿಸಿ ಅವರು ಮಾತನಾಡಿದರು.
ಉದ್ಯೋಗ ಎಂಬುದು ಒಂದು ವಿನೂತನ ಮೈಲಿಗಲ್ಲು. ಒಂದು ತಾಯಿ ನೀಡುವ ಪ್ರೀತಿ ಮಮತೆಯನ್ನು ಯುವ ಪೀಳಿಗೆಗೆ ಆಳ್ವಾಸ್ ಶಿಕ್ಷಣ ಸಂಸ್ಥೆ ನೀಡುತ್ತಿದೆ. ಸಾವಿರಾರು ಜನ ನಿರುದ್ಯೋಗಿಗಳಿಗೆ ಡಾ.ಮೋಹನ್ ಆಳ್ವ ತಾಯಿಯ ಜಾಗದಲ್ಲಿ ನಿಂತು ಉದ್ಯೋಗಾವಕಾಶ ನೀಡುತ್ತ ಪ್ರತಿ ತಾಯಿಯ ಕನಸನ್ನು ಪೂರ್ತಿ ಮಾಡುತ್ತಿದ್ದಾರೆ ಎಂದು ಹೇಳಿದರು.
ಕರ್ನಾಟಕ ಸರ್ಕಾರದಿಂದ ‘ಕೌಶಲ್ಯಕರ್ನಾಟಕ ’ ಎಂಬ ಒಂದು ಉದ್ಯೋಗ ಮಾಹಿತಿ ಸೇವೆಯನ್ನು ಕಲ್ಪಿಸಲಾಗಿದ್ದು ಇಲ್ಲಿಯವರೆಗೆ ಸುಮಾರು ಏಳು ಲಕ್ಷದಇಪ್ಪತ್ತು ಸಾವಿರ ಮಂದಿಯ ನೋಂದಾವಣಿ ಪ್ರಕ್ರಿಯೆ ನಡೆದಿದ್ದು, ಇನ್ನೂ ಉದ್ಯೋಗಾಕಾಂಕ್ಷಿ ಯುವಕ ಯುವತಿಯರು ಇದರಲ್ಲಿ ಹೆಸರು ನೋಂದಾಯಿಸಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ.ಮೋಹನ್ ಆಳ್ವ ಅವರು, ‘ತುಳುನಾಡು ಹಲವಾರು ಮಂದಿಗೆ ಹಲವು ರೀತಿ ಮತ್ತು ವಿಷಯಗಳಲ್ಲಿ ತ್ಯಾಗಮಾಡಿದೆ. ತಾಯಿ ನಾಡು ಮಾಡಿದ ತ್ಯಾಗಕ್ಕೆ ಯಾವ ರೀತಿ ನಾವು ಬದ್ಧರಾಗಿರುತ್ತೇವೆ ಎಂಬುದು ಮುಖ್ಯವಾಗುತ್ತದೆ. ಉದ್ಯೋಗದಿಂದ ಪಡೆದ ಆದಾಯದಲ್ಲಿ ನಾವೆಷ್ಟು ಕನ್ನಡನಾಡಿಗೆ ಸಮರ್ಪಿಸುತ್ತೇವೆ ಎಂಬುದು ಯೋಚಿಸಬೇಕಾದ ವಿಚಾರವಾಗಿದೆ’ ಎಂದು ತಮ್ಮ ಚಿಂತನೆಯನ್ನು ಮಂಡಿಸಿದರು.
ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಕಾರಣಕ್ಕೆ ಕೀಳರಿಮೆ ಬೇಡ. ನಮ್ಮ ಕೈಯಲ್ಲಿರುವ ಡಿಗ್ರಿ ಸರ್ಟಿಫಿಕೇಟ್ ಕೇವಲ ನಿಮಿತ್ತ ಮಾತ್ರ. ನಮ್ಮ ಜೀವನವನ್ನು ರೂಪಿಸಲು ಮಾದರಿಯಾಗುವುದು ನಮ್ಮೊಳಗಿರುವ ಕೌಶಲ್ಯ ಮಾತ್ರ. ಆ ಕೌಶಲ್ಯವನ್ನು ನಾವು ಬಲಗೊಳಿಸಬೇಕು. ಕನ್ನಡ ಮಾಧ್ಯಮಕ್ಕೆ ಆಗುತ್ತಿರುವ ಸೋಲು ಕೇವಲ ಕನ್ನಡದ ಸೋಲಲ್ಲ ಅದು ಒಬ್ಬ ಶ್ರೀಸಾಮಾನ್ಯನ ಸೋಲು ಎಂದು ಉಲ್ಲೇಖಿಸಿದರು.
ಮುಂದಿನ ವರ್ಷದಿಂದ ನುಡಿಸಿರಿಯ ಉದ್ಯೋಗಸಿರಿಗೆ ಹೆಚ್ಚಿನ ಒತ್ತು ನೀಡುತ್ತೇವೆ ಮತ್ತುರಾಜ್ಯಾದಾದ್ಯಂತ ಮಾಹಿತಿ ನೀಡುವ ಕಾರ್ಯ ನಿರ್ವಹಿಸುತ್ತೇವೆ ಎಂದರು.
ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಉದಯ ಮಂಜುನಾಥ ಅಡೆಮನೆ ಕಾರ್ಯಕ್ರಮ ನಿರ್ವಹಿಸಿದರು. ಆಳ್ವಾಸ್ ಶಿಕ್ಷಣಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ ಉಪಸ್ಥಿತರಿದ್ದರು.