Alvas Nudisiri

ನೋಂದಣಿ
ಆಮಂತ್ರಣ
ಸ್ಥಳ
ಗ್ಯಾಲರಿ
ಸಂಪರ್ಕ
ಆಳ್ವಾಸ್ ನುಡಿಸಿರಿ > ಮಾಧ್ಯಮ > ಪ್ರಕಟಣೆ > ಪ್ರತಿಭೆಯೊಂದಿಗೆ ವ್ಯುತ್ಪತ್ತಿಯನ್ನು ಬೆಳೆಸಿಕೊಂಡ ಯಕ್ಷ ಕಿನ್ನರ ಚಿಟ್ಟಾಣಿ – ವಿದ್ವಾನ್ ಡಾ.ಉಮಾಕಾಂತ್ ಭಟ್

ಪ್ರತಿಭೆಯೊಂದಿಗೆ ವ್ಯುತ್ಪತ್ತಿಯನ್ನು ಬೆಳೆಸಿಕೊಂಡ ಯಕ್ಷ ಕಿನ್ನರ ಚಿಟ್ಟಾಣಿ – ವಿದ್ವಾನ್ ಡಾ.ಉಮಾಕಾಂತ್ ಭಟ್

ಮೂಡಬಿದಿರೆ, ಡಿ. 03 :- ಪ್ರತಿಭಾನ್ವಿತ ಕಲಾವಿದರನ್ನು ವ್ಯುತ್ಪನ್ನ ಕಲಾವಿದರೆಂದು ಭಾವಿಸುವುದು ಕೇವಲ ಭ್ರಮೆ ಈ ಭ್ರಮಾಲೋಕವನ್ನು ಮುರಿದು ಪ್ರತಿಭೆಯ ಒಳಗೊಳಗೆ ವ್ಯುತ್ಪತ್ತಿಯನ್ನು ಬೆಳೆಸಿಕೊಂಡ ಅದ್ಭುತ ಮಿಂಚಿನ ಕಲಾವಿದ ಚಿಟ್ಟಾಣಿರಾಮಚಂದ್ರ ಎಂದು ವಿದ್ವಾನ್ ಡಾ.ಉಮಾಕಾಂತ್ ಭಟ್ ತಿಳಿಸಿದರು.

ಆಳ್ವಾಸ್ ನುಡಿಸಿರಿ-2017ರ ಪ್ರಯುಕ್ತಆಳ್ವಾಸ್ ಕಾಲೇಜಿರತ್ನಾಕರವರ್ಣಿ ವೇದಿಕೆಯಲ್ಲಿ ಆಯೋಜಿಸಿದ್ದ ಚಿಟ್ಟಾಣಿರಾಮಚಂದ್ರ ಹೆಗ್ಡೆಯವರ ಸಂಸ್ಮರಣೆಕಾರ್ಯಕ್ರಮದಲ್ಲಿ ಮಾತನಾಡಿದರು.

ಚಿಟ್ಟಾಣಿಯವರದು ಮರೆಯಲಾಗದ ಮತ್ತು ಮರೆಯಬಾರದ ವ್ಯಕ್ತಿತ್ವ. ಇವರಲ್ಲಿ ಎದ್ದು ಕಾಣುವ ವೈಶಿಷ್ಟ್ಯತೆ ಎಂದರೆ ಬಿಡುವಿಲ್ಲದ ದುಡಿಮೆ ಮತ್ತು ಪ್ರೇಕ್ಷಕರನ್ನು ದಣಿವಿಲ್ಲದೆ ತಣಿಸುವ ಕೌಶಲ್ಯ. ಪ್ರತಿಭಾನ್ವಿತ ಕಲಾವಿದರು ವ್ಯುತ್ಪುನ್ನ ಕಲಾವಿದರಾಗುವುದಿಲ್ಲ, ವ್ಯುತ್ಪತ್ತಿ ಕಲಾವಿದರೆಲ್ಲ ಪ್ರತಿಭಾನ್ವಿತ ಕಲಾವಿದರಲ್ಲ. ವ್ಯುತ್ಪತ್ತಿಯನ್ನ ಪ್ರತಿಭೆಯನ್ನಾಗಿ ಮಾರ್ಪಾಡು ಮಾಡಿದ ಹೆಗ್ಗಳಿಕೆ ಸಲ್ಲಬೇಕಾದುದು ರಾಮಚಂದ್ರ ಅವರಿಗೆ ಎಂದು ಅಭಿಪ್ರಾಯಪಟ್ಟರು.

ರಂಗಭೂಮಿಗೆ ಗೌರವವನ್ನು ತಂದುಕೊಡುವುದು ಸಾಧಾರಣದ ವಿಷಯವಲ್ಲ. ಕೆಲವು ವಿಶಿಷ್ಟ ವ್ಯಕ್ತಿಗಳಿಗೆ ರಂಗಭೂಮಿಗೆ ಗೌರವವನ್ನು ತಂದುಕೊಡುವ ಅರ್ಹತೆ ಮತ್ತು ಅವಕಾಶ ಸಿಗುತ್ತದೆ. ಅಂತಹ ಕಲಾವಿದರಲ್ಲಿ ಒಬ್ಬರು. ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗ್ಗಡೆಯವರು. ತಾನೂ ಬೆಳೆದು, ಬೆಳಗುತ್ತ ರಂಗಭೂಮಿಯನ್ನೂ ಬೆಳಗಿಸುವ ಇಂತಹ ಅದ್ಭುತ ರಂಗಕಲಾವಿದ ಚಿಟ್ಟಾಣಿಯವರು ಎಂದು ತಿಳಿಸಿದರು.

ಗುರುವನ್ನು ಗುರುತಿಸಿಕೊಂಡು ಓದಿದವರಲ್ಲ. ಆದರೆ ಕಾವ್ಯ ಪ್ರಯೋಗದ ಕಾವ್ಯವನ್ನು ಓದುವುದು. ಕಾವ್ಯವನ್ನು ಆಸ್ವಾದಿಸುವುದು, ಅರ್ಥೈಸಿ ಅದನ್ನ ಪ್ರಯೋಗ ಮಾಡುವ ಕಲೆಯಲ್ಲಿ ಚಿಟ್ಟಾಣಿಯವರು ಅತೀ ಪ್ರವೀಣರು. ಕುರಿತೋದದೆ ಗುರುವಾದ ಮಹಾನ್ ಕಲಾವಿದ. ಯಕ್ಷಗಾನದ ಹೊರತಾಗಿ ಅವರಿಗೆ ಬದುಕಿಲ್ಲ. ಯಕ್ಷಭೂಮಿಯನ್ನ ಬದುಕಾಗಿ ಸ್ವೀಕಾರ ಮಾಡಿದ ಇವರು ಯಕ್ಷಲೋಕದ ರಾಜಕುಮಾರ ಎಂದು ಉಲ್ಲೇಖಿಸಿದರು.

ಚಿಟ್ಟಾಣಿಯವರು ಮಹಾನ್ ಕಲಾ ಸಾಮ್ರಾಟರಾಗಿದ್ದೇ ಅವರ ಲಯಗಾರಿಕೆಯಿಂದ. ಇವರ ಸ್ಪರ್ಧಾತ್ಮಕ ಗುಣವೆ ಬಡಗುತಿಟ್ಟಿನ ಹಿಮ್ಮೇಳವನ್ನು ಬೆಳಸುವಲ್ಲಿ ಸಹಕಾರಿಯಾಯಿತು. ಉಳಿದ ಅಭಿನಯಕ್ಕಿಂತ ವಾಚಿಕ ಅಭಿನಯ ದೊಡ್ಡದು ಎನ್ನುವ ಕಾಲದಲ್ಲಿಅಂದರೆ ಸುಮಾರು 1960ರ ದಶಕದಲ್ಲಿ ನೃತ್ಯವೇ ಒಂದು ರಂಗಭೂಮಿಯ ಭಾಷೆ ಎಂಬ ಮಿಂಚನ್ನು ಸಂಚರಿಸಿದ ಮಾಹಾನ್ ವ್ಯಕ್ತಿಇವರುಎಂದರು.