Alvas Nudisiri

ನೋಂದಣಿ
ಆಮಂತ್ರಣ
ಸ್ಥಳ
ಗ್ಯಾಲರಿ
ಸಂಪರ್ಕ
ಆಳ್ವಾಸ್ ನುಡಿಸಿರಿ > ಮಾಧ್ಯಮ > ಪ್ರಕಟಣೆ > ಮನುಷ್ಯ ಧರ್ಮವನ್ನು ಉಳಿಸಬೇಕು: ರೇಖಾ ಕಾಖಂಡಕಿ

ಮನುಷ್ಯ ಧರ್ಮವನ್ನು ಉಳಿಸಬೇಕು: ರೇಖಾ ಕಾಖಂಡಕಿ

“ಪ್ರಸ್ತುತ ಇವತ್ತಿನ ಸ್ಥಿತಿಯಲ್ಲಿ ನಾವು ನಮ್ಮ ಸುತ್ತಲಿನ ಪರಿಸರ, ಪರಿಸ್ಥಿತಿ, ಸಂದರ್ಭಗಳನ್ನು ಕಂಡಾಗ ಯಾವುದೇ ಒಂದು ಕತ್ತಲಿನ ನೆರಳಿನಲ್ಲಿ ಬದುಕುತ್ತಿದ್ದೇವೆ ಎನಿಸುವಷ್ಟರ ಮಟ್ಟಿಗೆ,ಸಮಾಜದಲ್ಲಿ ದೌರ್ಜನ್ಯ, ಅನಾಚಾರಗಳು ನಡೆಯುತ್ತಿವೆ ಎಂದು ಕವಯಿತ್ರಿ ರೇಖಾ ಕಾಖಂಡಕಿ ಹೇಳಿದರು.
ಆಳ್ವಾಸ್ ನುಡಿಸಿರಿಯ ಕವಿಸಮಯ-ಕವಿನಮನ ಕಾರ್ಯಕ್ರಮದಲ್ಲಿ `ಯಾರಿದ್ದರೂ ಮನೆಯಲ್ಲಿ ಮನವೆಂಬ ಗೂಡಿನಲ್ಲಿ’ ಎಂಬ ಕವನ ವಾಚಿಸಿ ಮಾತನಾಡಿದರು. ಕುಸಿಯುತ್ತಿರುವ ಸಾಮಾಜಿಕ ಮೌಲ್ಯಗಳು, ನಶಿಸುತ್ತಿರುವ ಕೌಟುಂಬಿಕ ಸಂಬಂಧಗಳು ಇವುಗಳನ್ನೆಲ್ಲಾ ನೋಡಿದಾಗ ನಮ್ಮೂಳಗಿದ್ದ ಕತ್ತಲನ್ನು ಹೊರಹಾಕಲು ಒಂದು ಬೆಳಕಿನ ದೀಪ ಬೇಕಿದೆ. ಆ ದೀಪವನ್ನು ಹಚ್ಚಿ ಮನದೊಳಗಿದ್ದ ಕಲ್ಮಶಗಳನ್ನು ತೊಳೆಯಬೇಕಿದೆ. `ಮನುಷ್ಯರಿಗೆ ಬೇಕಾದದ್ದು ಮನುಷ್ಯ ಧರ್ಮ’. ಈ ಮನುಷ್ಯ ಧರ್ಮವನ್ನು ಉಳಿಸಬೇಕಿದೆ ಎಂಬ ಆಶಯ ವ್ಯಕ್ತಪಡಿಸಿದರು.
ಬಾಗೂರು ಮಾರ್ಕಂಡೇಯನವರು ಕವನಕ್ಕೆ ಕುಂಚದ ಸಾಥ್ ನೀಡಿದರು. ಆಶಿಷ್ ನಾಯಕ್ ಕವಿತೆಯನ್ನು ಹಾಡಿನ ಮೂಲಕ ಮತ್ತಷ್ಟು ಅರ್ಥಪೂರ್ಣಗೊಳಿಸಿದರು. ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ಡಾ.ಮೌಲ್ಯ ಜೀವನ್‍ರಾಮ್ ಕಾರ್ಯಕ್ರಮ ನಿರೂಪಿಸಿದರು. ಕವಿಸಮಯ ಕವಿನಮನ ಕಾರ್ಯಕ್ರಮದಲ್ಲಿ ನುಡಿಸಿರಿಯ ಅಧ್ಯಕ್ಷರಾದ ನಾಗತಿಹಳ್ಳಿ ಚಂದ್ರಶೇಖರ್, ಸ್ವಾಗತ ಸಮಿತಿಯ ಅಧ್ಯಕ್ಷರಾದ ನಾದಾ ಶೆಟ್ಟಿ ಉಪಸ್ಥಿತರಿದ್ದರು.