Alvas Nudisiri

ನೋಂದಣಿ
ಆಮಂತ್ರಣ
ಸ್ಥಳ
ಗ್ಯಾಲರಿ
ಸಂಪರ್ಕ
ಆಳ್ವಾಸ್ ನುಡಿಸಿರಿ > ಮಾಧ್ಯಮ > ಪ್ರಕಟಣೆ > ಹಳೆ ಆವಿಷ್ಕಾರಗಳಿಂದ ಮೆರುಗುಗೊಂಡ ಕೃಷಿಮೇಳ

ಹಳೆ ಆವಿಷ್ಕಾರಗಳಿಂದ ಮೆರುಗುಗೊಂಡ ಕೃಷಿಮೇಳ

 

ಮೂಡುಬಿದಿರೆ,ಡಿ.02: ಯಂತ್ರೋಪಕರಣಗಳ ನಡುವೆ ಕಣ್ಮರೆಯಾಗುತ್ತಿರುವ ನಮ್ಮ ಪೂರ್ವಜರ ಕಾಲದಲ್ಲಿ ಬಳಕೆಯಲ್ಲಿದ್ದ ಅನೇಕ ಸಾಮಾಗ್ರಿಗಳು ಇಂದು ಪ್ರದರ್ಶನಕ್ಕೆ ಇಟ್ಟು ಜನರಿಗೆ ಹಳೆಯ ಆವಿಷ್ಕಾರಗಳನ್ನು ತೋರಿಸುವ ಕಾರ್ಯ ನಡೆಯುತ್ತದೆ.

ಇದು ಮೂಡುಬಿದಿರೆಯ ಆಳ್ವಾಸ್‍ನಲ್ಲಿ ನಡೆಯುತ್ತಿರುವ ನುಡಿಸಿರಿಯ ಕೃಷಿಮೇಳದಲ್ಲಿ ಇದೇ ಮೊದಲ ಬಾರಿಗೆ ಗದಗ ಜಿಲ್ಲೆಯ ರೋಣ ಗ್ರಾಮದ ಮಲ್ಲಯ್ಯ ಗುರುಬಸಯ್ಯ ತಾವೇ ತಯಾರಿಸಿದ ಹಳೆ ಮಾದರಿಯ ಚಿಕ್ಕಚಿಕ್ಕ ಸಾಮಾಗ್ರಿಗಳ ಪ್ರದರ್ಶನಕ್ಕೆ ಇಟ್ಟದ್ದು ಕಂಡುಬಂತು. ಮೂಲತಃ ವ್ಯವಸಾಯಗಾರದ ಇವರ ವಿದ್ಯಾಭ್ಯಾಸ ಕೇವಲ ಏಳನೇ ತರಗತಿ. ಆದರೆ ಅಪಾರ ವಿಷಯ ಜ್ಞಾನವನ್ನು ಹೊಂದಿರುವ ಇವರು ಕನ್ನಡವನ್ನು ಉಳಿಸಿ ಬೆಳೆಬೇಕು ಎಂಬ ಹಿನ್ನೆಲೆಯಲ್ಲಿ ಸಾಕಷ್ಟು ಶ್ರಮಿಸಿದ್ದಾರೆ.

54 ಎಕ್ಕರೆ ಜಮೀನು ಹೊಂದಿರುವ ಮಲ್ಲಯ್ಯನವರು ಬಿಡುವಿನ ವೇಳೆಯಲ್ಲಿ ಈ ಸಣ್ಣ ಗಾತ್ರದ ಹಳೆ ಸಾಮಾಗ್ರಿಗಳನ್ನು ಬಿದಿರಿನಿಂದ ತಯಾರಿಸಿದ್ದಾರೆ. ಇದನ್ನು ಹವ್ಯಾಸವಾಗಿ ಮಾಡುತ್ತಿದ್ದು, ಮುಂದಿನ ಪೀಳಿಗೆ ಇಂತಹ ಆವಿಷ್ಕಾರಗಳನ್ನು ಗಮನಹರಿಸಬೇಕೆಂಬ ಉದ್ದೇಶವಾಗಿದೆ. ಜನಸಂಗ್ರಹವಿರುವ ಸ್ಥಳಗಳಿಗೆ ಮತ್ತು ಸಾಹಿತ್ಯ ಸಮ್ಮೇಳನದಂತಹ ಕಾರ್ಯಕ್ರಮಗಳಲ್ಲಿ ಮಾತ್ರ ಪ್ರದರ್ಶನಕ್ಕೆ ಇಡುತ್ತಾರೆ

500 ವರ್ಷಗಳ ಹಿಂದಿನ ಚರ್ಮದಿಂದ ತಯಾರಿಸಿದ ವಸ್ತುಗಳನ್ನು ಇಲ್ಲಿ ಕಾಣಬಹುದು. ಪೂರ್ವಜರು ಬರೆಯಲು ಬಳಸುತ್ತಿದ್ದ ಹೆಣ್ಣು ನವಿಲ ಗರಿ, ಒಂದು ಜಾತಿಯ ಬಿದಿರಿನ ಗಲಗ, ಟಾಕು, ತಲೆಗರಿ, ಆವಿಸ್ಕಾರಗಳು ಹೀಗೆ ಹಲವಾರು ಆವಿಷ್ಕಾರಗಳು ಇಲ್ಲಿ ಗಮನಸೆಳೆದವು. ಗೀಜಗನ ಗೂಡು, ಮರ ಮತ್ತು ಬಿದಿರಿನಿಂದಲೇ ತಯಾರಿಸಿದ ಪುಂಗಿ, ದೆವ್ವ ಬಿಡಿಸುವ ಕೋಡ, ಚಾಟಿ, ಕವಣೆ, ಬಸವನನ್ನು ಶೃಂಗರಗೊಳಿಸಲು ಬಳಸುವ ಬಾಸಿಂಗ, ಇನ್ನು ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಹಾಗೂ ಹಳ್ಳಿಗಳಲ್ಲಿ ಕೃಷಿ ಕೆಲಸಕ್ಕೆ  ಉಪಯೋಗಿಸುವ ಸಾಕಷ್ಟು ಹಳೆ ಸಾಮಾಗ್ರಿಗಳು ಕೃಷಿಮೇಳದ ಮೆರುಗುಗೊಳಿಸಿತ್ತು.

ಇವೆಲ್ಲಾದರ ನಡುವೆ ಕನ್ನಡ ಭಾಷೆಯ ಮಹತ್ವವನ್ನು ಸಾರಲು ಕನ್ನಡಾಭಿಮಾನಿ ಪುಣ್ಯತ್ಮಾರುಗಳೇ ದಯವಿಟ್ಟು ಈ ಫಲಕವನ್ನು ಸಂಪೂರ್ಣ ಓದಿರಿಎಂಬ ಕನ್ನಡ ಭಾಷೆಯ ಅಳಿವು ಉಳಿವು, ಪರಿಸರ ಮಾಲಿನ್ಯ, ರಾಷ್ಟ್ರೀಯ ಭಾವೈಕ್ಯ ಇವೆಲ್ಲಾದುರ ಬಗ್ಗೆ ಪ್ರಜ್ಞೆ ಮೂಡಿಸುವ ಫಲಕವನ್ನು ಹಾಕಿ ಕನ್ನಡಾಭಿಮಾನವನ್ನು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಹಳೆ ವಸ್ತುಗಳನ್ನು ಜನರಿಗೆ ಮಹತ್ವ ತಿಳಿಸಿಕೊಡುವುದರೊಂದಿಗೆ ಕನ್ನಡವನ್ನು ಉಳಿಸುವ ಮಹತ್ತರ ಸೇವೆ ಇವರದ್ದಾಗಿದೆ.

 

ರಾಜೇಶ್ವರಿ ಬೆಳಾಲು

ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ

ಎಸ್.ಡಿ.ಎಂ ಕಾಲೇಜು, ಉಜಿರೆ