Alvas Nudisiri

ನೋಂದಣಿ
ಆಮಂತ್ರಣ
ಸ್ಥಳ
ಗ್ಯಾಲರಿ
ಸಂಪರ್ಕ
ಆಳ್ವಾಸ್ ನುಡಿಸಿರಿ > ಮಾಧ್ಯಮ > ಪ್ರಕಟಣೆ > ಆಳ್ವಾಸ್ ಚಿತ್ರಕಲಾ ಮೇಳ ಹಾಗೂ ಪ್ರದರ್ಶನ

ಆಳ್ವಾಸ್ ಚಿತ್ರಕಲಾ ಮೇಳ ಹಾಗೂ ಪ್ರದರ್ಶನ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಚಿತ್ರಕಲೆಯ ಕುರಿತು ಜನಜಾಗೃತಿಗಾಗಿ ಒಂದು ಬೃಹತ್ ಅಚ್ಚುಕಟ್ಟಾದ ಚಿತ್ರಸಂತೆಯನ್ನು ಆಯೋಜಿಸಿದ್ದು, ನಾಡಿನ ಚಿತ್ರಕಲಾವಿದರಿಗೆ ಸುವರ್ಣ ಅವಕಾಶವನ್ನು ಕಲ್ಪಿಸಲಾಗಿದೆ. ನವಂಬರ್ 18ರಿಂದ 20ರವರೆಗೆ ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ನಡೆಯಲಿರುವ ಆಳ್ವಾಸ್ ನುಡಿಸಿರಿಯ ಸಂದರ್ಭದಲ್ಲಿ ಏರ್ಪಡಿಸಲಾಗಿರುವ ಈ ಚಿತ್ರಕಲಾ ಮೇಳವು ನಾಡು ನುಡಿಯ ಸಂಸ್ಕೃತಿ ಹಬ್ಬದಲ್ಲಿ ಪಾಲ್ಗೊಳ್ಳುವ ಸಾವಿರಾರು ಕಲಾರಸಿಕರಿಗೆ ರಸದೌತಣ ನೀಡಲಿದೆ.
ರಾಜ್ಯದ ವಿವಿಧ ಜಿಲ್ಲೆಗಳ ಚಿತ್ರಕಲಾವಿದರು ತಮ್ಮ ಕಲಾಕೃತಿಗಳ ಪ್ರದರ್ಶನದ ಜೊತೆಗೆ ಸ್ಥಳದಲ್ಲೇ ಮಾರಾಟವನ್ನೂ ಮಾಡಬಹುದು. ಕಲಾ ಶಾಲೆಗಳ ವಿದ್ಯಾರ್ಥಿಗಳೂ ತಮ್ಮ ಶಾಲಾ ಮುಖ್ಯಸ್ಥರ ಅನುಮತಿ ಪತ್ರದೊಂದಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ. ಒಬ್ಬರು ಗರಿಷ್ಟ ಎರಡು ಮಳಿಗೆಗಳನ್ನು ಪಡೆಯಲು ಅವಕಾಶವಿದೆ. ಕಲಾಕೃತಿಗಳ ಪ್ರದರ್ಶನಕ್ಕಾಗಿ ೭ ಅಡಿ ಎತ್ತರ ಹಾಗೂ ೧೦ ಅಡಿ ಅಗಲ ವಿಸ್ತಾರದ ಸಮತಳ ಮಳಿಗೆಗಳನ್ನು ನೀಡಲಾಗುವುದು. ಉಳಿದಂತೆ ಪ್ರದರ್ಶನಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಚಿತ್ರಕಲಾವಿದರೇ ತರಬೇಕಾಗುತ್ತದೆ. 18-11-2016ರ ಬೆಳಿಗ್ಗೆ 9ಗಂಟೆಯೊಳಗೆ ಮಳಿಗೆಗಳಲ್ಲಿ ತಮ್ಮ ಕಲಾಕೃತಿಗಳ ಪ್ರದರ್ಶನ ಸಂಪೂರ್ಣಗೊಳಿಸಿರಬೇಕು.

ಕಲಾವಿದರು ತಮ್ಮ ಮಳಿಗೆಗಳಲ್ಲಿ ಚಿತ್ರಕಲೆಯ ಕುರಿತು ಪ್ರಾತ್ಯಕ್ಷಿಕೆ ನೀಡಬಹುದು. ಭಾಗವಹಿಸುವ ಪ್ರತೀ ಚಿತ್ರಕಲಾವಿದರಿಗೂ ಉಚಿತ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಕಲಾವಿದರಿಗೆ ಅಭಿನಂದನಾ ಪತ್ರವನ್ನೂ ನೀಡಲಾಗುವುದು. ಆಸಕ್ತರು ನವಂಬರ್ ೧೫ರೊಳಗೆ ತಮ್ಮ ಪೂರ್ಣ ವಿಳಾಸ, ದೂರವಾಣಿ ಸಂಖ್ಯೆ, ಬೇಕಾದ ಮಳಿಗೆ ವಿವರ, ಇತ್ಯಾದಿ ವಿವರಗಳೊಂದಿಗೆ ಅರ್ಜಿಗಳನ್ನು ’ಅಧ್ಯಕ್ಷರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡಬಿದಿರೆ-574227 ದ.ಕ’ ಈ ವಿಳಾಸಕ್ಕೆ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಕಲಾವಿದರಿಗೆ ಮಳಿಗೆ ಸಂಖ್ಯೆ ನೀಡಲಾಗುವುದು.

ಆನ್ಲೈನ್ ಅರ್ಜಿಗಳಿಗೆ www.alvasnudisiri.com ಗೆ ಭೇಟಿ ಕೊಡಿ.

ಹೆಚ್ಚಿನ ವಿವರಗಳಿಗೆ ಭಾಸ್ಕರ್ ನೆಲ್ಯಾಡಿ 9901114843 ಇವರನ್ನು ಸಂಪರ್ಕಿಸಲು ಕೋರಲಾಗಿದೆ.