Alvas Nudisiri

ನೋಂದಣಿ
ಆಮಂತ್ರಣ
ಸ್ಥಳ
ಗ್ಯಾಲರಿ
ಸಂಪರ್ಕ
ಆಳ್ವಾಸ್ ನುಡಿಸಿರಿ > ಮಾಧ್ಯಮ > ಪ್ರಕಟಣೆ > ಆಳ್ವಾಸ್ ವಿದ್ಯಾರ್ಥಿಸಿರಿ 2017 – ಅರ್ಜುನ್ ಶೆಣೈ ಅಧ್ಯಕ್ಷ

ಆಳ್ವಾಸ್ ವಿದ್ಯಾರ್ಥಿಸಿರಿ 2017 – ಅರ್ಜುನ್ ಶೆಣೈ ಅಧ್ಯಕ್ಷ

ಕವಿಗೋಷ್ಠಿ ಅಧ್ಯಕ್ಷೆ ಸನ್ನಿಧಿ. ಟಿ. ರೈ, ಪೆರ್ಲ; ಸಮಾರೋಪಕ್ಕೆ ನಚಿಕೇತ ನಾಯಕ್

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ನಡೆಸುತ್ತಿರುವ ವಿದ್ಯಾರ್ಥಿ ಸಾಹಿತ್ಯ ಸಂಸ್ಕೃತಿ ಸಮ್ಮೇಳನ ’ಆಳ್ವಾಸ್ ವಿದ್ಯಾರ್ಥಿ ಸಿರಿ – ೨೦೧೭’ ರ ಅಧ್ಯಕ್ಷರಾಗಿ ಉಜಿರೆ ಎಸ್‌ಡಿಎಂ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಅರ್ಜುನ್ ಶೆಣೈ ಅವರು ಆಯ್ಕೆಯಾಗಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ ಮೋಹನ ಆಳ್ವ ತಿಳಿಸಿದ್ದಾರೆ.
ಆಳ್ವಾಸ್ ವಿದ್ಯಾರ್ಥಿಸಿರಿ ೨೦೧೭ ರ ಸಮ್ಮೇಳನವು ನವಂಬರ ೩೦ ರಂದು ವಿದ್ಯಾಗಿರಿಯ ರತ್ನಾಕರವರ್ಣಿ ವೇದಿಕೆಯಲ್ಲಿ ನಡೆಯಲಿದ್ದು ಈ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆಗೆ ಕಾಸರಗೋಡು ಚಿನ್ಮಯಿ ವಿದ್ಯಾಲಯದ ಎಂಟನೇ ತರಗತಿ ವಿದ್ಯಾರ್ಥಿನಿ ಸನ್ನಿಧಿ ಟಿ.ರೈ ಪೆರ್ಲ ಇವರು ಆಯ್ಕೆಯಾಗಿದ್ದಾರೆ. ಉಡುಪಿಯ ಒಳಕಾಡು ಸರಕಾರಿ ಸಂಯುಕ್ತ ಪ್ರೌಢಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ನಚಿಕೇತ ನಾಯಕ್ ಸಮಾರೋಪ ಭಾಷಣ ಮಾಡಲಿದ್ದಾರೆ.

ಅರ್ಜುನ್ ಶೆಣೈ

ಅರ್ಜುನ್ ಶೆಣೈ

ಅಧ್ಯಕ್ಷರಾಗಿ ಆಯ್ಕೆಯಾದ ಅರ್ಜುನ್ ಶೆಣೈ ಮೂಲತ: ಚಿಕ್ಕಮಗಳೂರು ಜಿಲ್ಲೆಯ ಅರುಣ್ ಶೆಣೈ ಮತ್ತು ವಿನಯ ಶೆಣೈ ಅವರ ಪುತ್ರ. ಕಥೆ, ಕವನ, ಕಾದಂಬರಿ ರಚನೆಯಲ್ಲಿ ತೊಡಗಿಕೊಂಡಿದ್ದು ಈಗಾಗಲೇ ೬ ಕವನ ಸಂಕಲನ, ೧ ಕಥಾ ಸಂಕಲನ, ಒಂದು ಕಾದಂಬರಿಯನ್ನು ರಚಿಸಿರುತ್ತಾರೆ. ರಾಷ್ಟ್ರೀಯ ಮಕ್ಕಳ ಸೃಜನಶೀಲ ಪ್ರತಿಭಾ ಉತ್ಸವದ ಬರವಣಿಗೆ ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿರುತ್ತಾರೆ. ’ನಾವಿನ್ಯತೆಯ ನೂರು ಮುಖಗಳು’ ಕೃತಿಗೆ ರಾಜ್ಯಮಟ್ಟದ ’ವಿದ್ಯಾಸಾಗರ ಬಾಲ ಪುರಸ್ಕಾರ ೨೦೧೩’ ಪ್ರಶಸ್ತಿ ಪಡೆದಿದ್ದಾರೆ. ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ, ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಪ್ರಶಸ್ತಿ, ಕಲಾಶ್ರೀ ಪ್ರಶಸ್ತಿ, ರಾಷ್ಟ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟಗಳ ಹಲವು ಭಷಣ ಮತ್ತು ಪ್ರಬಂಧ ಸ್ಫರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ.

 

 

 

ಸನ್ನಿಧಿ. ಟಿ. ರೈ, ಪೆರ್ಲ

ಸನ್ನಿಧಿ. ಟಿ. ರೈ, ಪೆರ್ಲ

ಕವಿಗೋಷ್ಠಿಯ ಅಧ್ಯಕ್ಷತೆಗೆ ಆಯ್ಕೆಯಾದ ಸನ್ನಿಧಿ ಟಿ.ರೈ ಪೆರ್ಲ ಇವರು ಕಾಸರಗೋಡಿನ ಪೆರ್ಲ ತಾರಾನಾಥ ರೈ ಮತ್ತು ರಾಜಶ್ರೀ ಅವರ ಪುತ್ರಿ. ಬಹುಮುಖ ಪ್ರತಿಭಾನ್ವಿತೆ. ಯಕ್ಷಗಾನ ಭಾಗವತಿಕೆ, ಶಾಸ್ತ್ರೀಯ, ಸುಗಮ ಸಂಗೀತ, ಭರತನಾಟ್ಯ, ಯೋಗ, ಕರಾಟೆ, ಕೀಬೋರ್ಡ್, ವಯಲಿನ್ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ಇವರು ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಕವಿತೆಗಳನ್ನು ಬರೆಯುತ್ತಾರೆ. ’ಚಿಲಿಪಿಲಿ ಚಿತ್ತಾರ’ ಕನ್ನಡ ಕವನ ಸಂಕಲನ ಪ್ರಕಟಗೊಂಡಿದೆ. ಶೇಡ್ಸ್ ಎಂಬ ಇಂಗ್ಲಿಷ್ ಕವನ ಸಂಕಲನ ಬಿಡುಗಡೆಗೆ ಸಿದ್ಧಗೊಂಡಿದೆ. ಕರ್ನಾಟಕ ರಾಜ್ಯೋತ್ಸವ ಸಾಧಕ ಪುರಸ್ಕಾರ, ಬಾಂಧವ್ಯ ಪುರಸ್ಕಾರ, ಕೇರಳ ತುಳು ಅಕಾಡೆಮಿ ಸನ್ಮಾನ, ಕರ್ನಾಟಕ ಪ್ರತಿಭಾ ರತ್ನ ಪ್ರಶಸ್ತಿ, ಒಡಿಯೂರಿನ ಪ್ರತಿಭಾ ಪುರಸ್ಕಾರಗಳು ಬಂದಿವೆ.

 

 

 

 

ನಚಿಕೇತ ನಾಯಕ್

ನಚಿಕೇತ ನಾಯಕ್

ಸಮಾರೋಪ ಭಾಷಣ ಮಾಡಲಿರುವ ನಚಿಕೇತ ನಾಯಕ್ ಉಡುಪಿಯ ರವಿರಾಜ ನಾಯಕ್ ಹಾಗೂ ಕವನ ಅವರ ಮಗ. ಭಾಷಣ, ವಿಜ್ಞಾನ ವಿಚಾರಗೋಷ್ಠಿ, ರಸಪ್ರಶ್ನೆ, ಯಕ್ಷಗಾನ, ಸಾಹಿತ್ಯ ಕ್ಷೇತ್ರಗಳಲ್ಲಿ ಆಸಕ್ತ. ಜಿಲ್ಲಾ ಹಾಗೂ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಬಹುಮಾನ ವಿಜೇತ. ರಾಜ್ಯಮಟ್ಟದ ಯುವಸಂಸತ್ತು ಹಾಗೂ ವಿಜ್ಞಾನ ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ.

ಆಯ್ಕೆ ಪ್ರಕ್ರಿಯೆಯು ಇತೀಚೆಗೆ ವಿದ್ಯಾಗಿರಿಯ ಆಳ್ವಾಸ್ ಸೆಮಿನಾರ್ ಹಾಲ್‌ನಲ್ಲಿ ನಡೆಯಿತು. ಆಯ್ಕೆ ಪ್ರಕ್ರಿಯೆಯಲ್ಲಿ ಅಂಡಾರು ಗುಣಪಾಲ ಹೆಗ್ಡೆ, ಜಯರಾಮ ಪೂಂಜ ಕಟೀಲು, ಶ್ರೀಧರ ಜೈನ್, ರಾಮಕೃಷ್ಣ ಶಿರೂರು, ಧನಂಜಯ ಕುಂಬ್ಳೆ ಮೌಲ್ಯಮಾಪಕರಾಗಿ ಭಾಗವಹಿಸಿದ್ದರು. ಲಿಖಿತ ಪರೀಕ್ಷೆ, ಆಶುಭಾಷಣ ಹಾಗೂ ಸದರ್ಶನದ ಮೂಲಕ ಈ ಆಯ್ಕೆಯನ್ನು ಮಾಡಲಾಗಿದೆ ಎಂದು ಡಾ. ಎಂ ಮೋಹನ ಆಳ್ವ ತಿಳಿಸಿದ್ದಾರೆ.