Alvas Nudisiri

ಭಾಗವಹಿಸುವ ಕಂಪನಿಗಳು | Companies Participating

 

Date: 3rd December 2017
Alva's vidyagiri campus(PG Block)
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ , ಮೂಡಬಿದ್ರಿಯು  ಕಳೆದ ಹದಿನಾಲ್ಕು ವರ್ಷಗಳಿಂದ ಸಾಹಿತ್ಯಿಕ , ಬೌದ್ಧಿಕ , ಸಾಂಸ್ಕೃತಿಕ ಮತ್ತು ವೈಚಾರಿಕ – ಹೀಗೆ ವಿವಿಧ ಆಯಾಮಗಳಲ್ಲಿ ನಡೆಸಿಕೊಂಡು ಬರುತ್ತಿರುವ ” ಆಳ್ವಾಸ್ ನುಡಿಸಿರಿ ” ಸಮ್ಮೇಳನವು ರಾಷ್ಟ್ರೀಯ ನಾಡು – ನುಡಿಯ ಉತ್ಸವವಾಗಿದೆ . ಪ್ರತಿದಿನ ಸುಮಾರು ಒಂದು ಲಕ್ಷಕ್ಕೂ ಅಧಿಕ ಸಾಹಿತ್ಯಾಸಕ್ತರು ಕನ್ನಡ ನಾಡು- ನುಡಿಯನ್ನು ಕಟ್ಟುವ ಈ ಕಾಯಕಕ್ಕೆ ಸಾಕ್ಷಿಯಾಗುತ್ತಾರೆ . ಸುಮಾರು  ಮೂವತ್ತು ಸಾವಿರ ಮಂದಿ ಆಳ್ವಾಸ್ ವಿದ್ಯಾಗಿರಿ ಆವರಣದಲ್ಲಿ ಉಳಿದು ಸಾಹಿತ್ಯ ಲೋಕದ ವೈಭವದಲ್ಲಿ ಪಾಲ್ಗೊಳ್ಳುತ್ತಾರೆ. ಕನ್ನಡ ಭಾಷೆ , ಕಲೆ, ಸಾಹಿತ್ಯ , ಸಾಂಸ್ಕೃತಿಕ ರಂಗ , ಕೃಷಿ , ಜಾನಪದ ಕಲೆ , ನಾಟಕ ಮತ್ತು ಸಿನಿಮಾ – ಹೀಗೆ ಕನ್ನಡ ಮನಸ್ಸನ್ನು ಉಳಿಸಿ ಬೆಳೆಸುವ ಕೆಲಸ ನುಡಿಸಿರಿಯಿಂದ ನಿರಂತರವಾಗಿ ನಡೆಯುತ್ತಿದೆ. ಕನ್ನಡ ನೆಲ, ಪರಿಸರ ಮತ್ತು ಕೃಷಿ-ಕ್ರೀಡೆಗಳ ವಿಭಿನ್ನ ಆಯಾಮದ ಚಿಂತನೆ ನುಡಿಸಿರಿಯ ವೈಶಿಷ್ಟ್ಯಗಳಲ್ಲೊಂದು .

ನಮಗೆಲ್ಲರಿಗೂ ಕನ್ನಡ ನಾಡಿನ ಗಾಳಿ , ಮಣ್ಣು ಮತ್ತು ನೀರಿನ ಋಣವಿದೆ . ಕನ್ನಡ ನಾಡಿನ ವಿಚಾರಧಾರೆಗಳನ್ನು ಇನ್ನೂ ನೂರ್ಕಾಲ ಕೊಂಡೊಯ್ಯಬೇಕಿದೆ . ಈ ನಿಟ್ಟಿನಲ್ಲಿ ಆಳ್ವಾಸ್ ನುಡಿಸಿರಿಯ ಪ್ರಯುಕ್ತ ,  ಕನ್ನಡ ಮಾಧ್ಯಮದಲ್ಲಿ ಒಂದರಿಂದ ಹತ್ತನೇ ತರಗತಿಯವರೆಗೆ ಕಲಿತು ತದನಂತರ ಇತರೆ ಪದವಿಗಳನ್ನು (ಡಿಗ್ರಿ, ಸ್ನಾತಕೋತ್ತರ , ಇಂಜಿನಿಯರಿಂಗ್ ಇತ್ಯಾದಿ ) ಪಡೆದ ಅಭ್ಯರ್ಥಿ ಗಳಿಗೆ ಡಿಸೆಂಬರ್ 3  ರಂದು ವಿಶೇಷ ಉದ್ಯೋಗ ಮೇಳವನ್ನು ನಡೆಸಲು ನಿರ್ಧರಿಸಲಾಗಿದೆ .

ಈ ಉದ್ಯೋಗ ಮೇಳದಲ್ಲಿ  ಭಾಗವಹಿಸಲು ಇಚ್ಚಿಸುವ ಅಭ್ಯರ್ಥಿಗಳು 1 ರಿಂದ 10  ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತಿರಬೇಕು .

“ಆಳ್ವಾಸ್ ಉದ್ಯೋಗಸಿರಿ – 2017 ” ಗೆ ತಮ್ಮ ಸಂಪೂರ್ಣ ಸಹಕಾರ ಮತ್ತು ಬೆಂಬಲವನ್ನು ಕೋರುತ್ತಿದ್ದೇವೆ.

 Alva’s Education Foundation takes immense pride in hosting the annual literary cultural festival showcasing Kannada literature and heritage. Alva’s Nudisiri successfully for the past fourteen years. Around 1, 00, 000 people visit Nudisiri every day and 30,000 stay during the cultural spectacle. The event also celebrates Kannada minds in its many facets- Language, literature, cultural sphere which is influenced by Kannada, art, agriculture, unearthing students’ talent, traditional folk art, drama and cinema. Nudisiri is also an event which explores how different aspects of Kannada land, viz, nature, indigenous and rural sports and agriculture have grown in the last two to three thousand years.We all have benefitted from the land, air and water of Kannada Nadu. We should promote and keep up the positivity of its culture for generations together. We are indebted to the rich heritage and legacy of our soil. Therefore, Alva’s Education Foundation, in the backdrop of Alva’s Nudisiri- 2017 at Vidyagiri Campus, Moodbidri intends to strengthen the deep roots of Kannada by organizing an exclusive Placement Drive for those candidates who have studied in Kannada Medium up to their SSLC/10th Standard and then continued their education for Graduation, Post Graduation or any other professional degree on 3rd December. The candidates may have gone on to study in other mediums after their SSLC/10th Standard, but the main criterion remains that they should have completed their education till SSLC/10th Standard in Kannada Medium.

We seek your cooperation and support in this noble initiative.

We cordially invite you to Alva’s Udyogasiri 2017 and become a part of a mutually beneficial and long-lasting association.

ಯಾರು ಅರ್ಜಿ ಸಲ್ಲಿಸಬಹುದು?

ಕನ್ನಡ ಮಾಧ್ಯಮ ವಿಭಾಗದಲ್ಲಿ ಎಸ್.ಎಸ್.ಎಲ್.ಸಿ ಪೂರ್ಣಗೊಂಡ ಬಳಿಕ ಪಿ.ಯು.ಸಿ, ಐ.ಟಿ.ಐ, ಡಿಪ್ಲೊಮಾ (ಎಲ್ಲಾ ಸ್ಟ್ರೀಮ್ಗಳು), ಪದವಿ (ಎಲ್ಲಾ ಸ್ಟ್ರೀಮ್ಗಳು), ಸ್ನಾಥಕೋಥರ ಪದವಿ (ಎಲ್ಲಾ ಸ್ಟ್ರೀಮ್ಸ್), ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಮುಗಿದ ಅರ್ಹ ಅಭ್ಯರ್ಥಿಗಳು.

ಕನ್ನಡ ಮಾಧ್ಯಮ ವಿಭಾಗದಲ್ಲಿ ಎಸ್ಎಸ್ಎಲ್ಸಿ ಪೂರ್ಣಗೊಂಡ ಅಭ್ಯರ್ಥಿಗಳು ಉದ್ಯೋಗ ಸಿರಿ ಮೇಳದಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ.

Who can apply!!

Any eligible candidate who has completed, PUC, ITI, Diploma(All streams), Under Graduation(All streams), Post Graduations(All Streams), Medical & Paramedical with the SSLC completion in Kannada medium discipline.

Candidates with SSLC completion in Kannada medium discipline are eligible to take up the Udyoga Siri Job Fair.

ಅಭ್ಯರ್ಥಿಗಳು ಈ ಕೆಳಗಿನ ದಾಖಲೆಗಳನ್ನು ಅಗತ್ಯವಾಗಿ ತರತಕ್ಕದ್ದು

  • 5-10 ಪಾಸ್ ಪೋರ್ಟ್ಗಾ ತ್ರದ ಫೋಟೋ
  • ಇತ್ತೀಚಿನ ಸ್ವವಿವರ ಮಾಹಿತಿ / ಬಯೋ ಡೇಟಾ / ರೆಸೂಮ್
  • ಎಸ್ಎಸ್ಎಲ್ಸಿ / 10 ನೇ ಮಾರ್ಕ್ ಕಾರ್ಡ್ (ಜೆರಾಕ್ಸ್)
  • ಎಲ್ಲಾ ಇತರ ಮಾರ್ಕ್ ಕಾರ್ಡುಗಳು (ಜೆರಾಕ್ಸ್)
  • ವಿದ್ಯಾಗಿರಿ ಆವರಣದಲ್ಲಿ ಬೆಳಗ್ಗೆ 8. 30 ಗೆ ಬರಬೇಕೆಂದು ಕೋರಲಾಗಿದೆ
Interview Requirements: Participants must carry

  • 5-10 Passport Size Photo
  • Updated Resume
  • SSLC/10th Mark Card(Xerox)
  • All other Mark Cards(Xerox)
  • Participants are requested to be assembled by 8.30 a.m. at Vidyagiri Campus

Helpdesk/ಸಹಾಯವಾಣಿ:

+91-9611686148 | +91-8494934852 | +91-9008907716 | +91-8971250414 | +91-9844762311
ವೃತ್ತಿ ವಿಂಗಡಣೆ

Corporate Career Profiling

ಅಭ್ಯರ್ಥಿಗಳು ಆನ್ ಲೈನ್ ನೋಂದಣಿ ಮಾಡಿದಲ್ಲಿ ಮಾತ್ರ ವೃತ್ತಿ ವಿಂಗಡಣೆ  ಸಾಧ್ಯ. ನೋಂದಾಯಿತ ಅಭ್ಯರ್ಥಿಗಳ ಸೂಕ್ತ ಮಾಹಿತಿಯನ್ನು  ಸೆರೆಹಿಡಿದು ಕಂಪನಿಯ ಅಗತ್ಯತೆಗಳೊಂದಿಗೆ ಜೋಡಿಸಲಾಗುವುದು. ಆದ್ದರಿಂದ ಕಂಪನಿಗಳು ತಮ್ಮ ವಿಭಾಗದಲ್ಲಿ ಪರಿಣಾಮಕಾರಿ ನೇಮಕಾತಿ ಮತ್ತು ಆಯ್ಕೆ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಬಹುದು . ಉದ್ಯೋಗಮೇಳದಂದು , ಅಭ್ಯರ್ಥಿಗಳನ್ನು ಅವರು ಅನ್ವಯಿಸುವ ಮತ್ತು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಕಂಪನಿಗಳನ್ನು ಗುರುತಿಸಲು ಮತ್ತು  ಸಕ್ರಿಯಗೊಳಿಸಲು ಬಣ್ಣ ಕೋಡಿಂಗ್ ಕಾರ್ಡ್ ಗಳನ್ನು ವಿದ್ಯಾರ್ಹತೆಗನುಗುಣವಾಗಿ  ನೀಡಲಾಗುವುದು.

The Corporate Career Profiling (CCP) which is possible because of on-line registration of candidates.

The relevant information is captured from the aspirants during the registration process and then aligned with  the company’s requirements. The companies therefore can focus on their target segment leading to an effective recruitment and selection process.

On the day of the drive, colour coding is done to enable the candidates to identify the companies where they can apply and attend the selection process.

ನೋಂದಣಿ ಶುಲ್ಕಗಳು ಇಲ್ಲ

No Registration Fees

ಉದ್ಯೋಗಸಿರಿಯು ಮಹತ್ತರ ಉದ್ದೇಶದ ಈಡೇರಿಕೆಗಾಗಿ ನಡೆಸಲ್ಪಡುವುದರಿಂದ ಯಾವುದೇ ಶುಲ್ಕವನ್ನು ಅಭ್ಯರ್ಥಿಗಳಿಂದ ಅಥವಾ ಕಂಪನಿ ಗಳಿಂದ ತೆಗೆದುಕೊಳ್ಳಲಾಗುವುದಿಲ್ಲ. ಆಳ್ವಾಸ್ ಶಿಕ್ಷಣ ಸಂಸ್ಥೆಯು ಉದ್ಯೋಗಸಿರಿಯ ಎಲ್ಲಾ ಖರ್ಚು ವೆಚ್ಚವನ್ನು ಭರಿಸುತ್ತದೆ.

Udyoga siri  is purely cause driven and there will be no money charged to either the candidate or to the company. Alvas Education Foundation hosts the entire placement drive.

ಉದ್ಯೋಗ ಮಾಹಿತಿ  ಕೇಂದ್ರ

Employment Enhancement Center

ಉದ್ಯೋಗ ಮಾಹಿತಿ ಕೇಂದ್ರವು ಅಭ್ಯರ್ಥಿಗೆ ಸೂಕ್ತ ವೃತ್ತಿ ಮಾರ್ಗದರ್ಶನವನ್ನು ಪರಿಣತರ ಮುಖಾಂತರ   ಕೊಡುವುದರ ಮೂಲಕ ಸರಿಯಾದ ವೃತ್ತಿ ಗೆ ಅಭ್ಯರ್ಥಿಗಳನ್ನು ಅಣಿಗೊಳಿಸುತ್ತದೆ.

Employment Enhancement Center where in career counselors are assigned to guide students to their most suitable job description(s) offered by the companies.

ಕಂಪೆನಿಯ ಅವಶ್ಯಕತೆಗಳ  ಬೇರ್ಪಡಿಸುವಿಕೆ

Segregation to company requirements

ಕಂಪನಿ ಗಳ ಅವಶ್ಯಕತೆಗಳಿಗೆ ಅನುಸಾರವಾಗಿ ಅಭ್ಯರ್ಥಿಗಳನ್ನು ವಿಂಗಡಿಸಲಾಗುವುದು . ಕಂಪನಿಗಳು  ನಿರ್ದಿಷ್ಟಪಡಿಸಿದ ಅವಶ್ಯಕತೆಗಳನ್ನು ಅಭ್ಯರ್ಥಿಗಳ  ಅರ್ಹತೆಗಳು, ಹಿನ್ನೆಲೆ ಮತ್ತು ಅವರ ನಿರೀಕ್ಷೆಗಳ ಮೇಲೆ ನಿರ್ಧರಿಸ ಲಾಗುತ್ತದೆ.

The job aspirants will be segregated as per the companies specified requirements. The company’s initially specify the requirements of the candidates their qualifications, their background, the qualities and attributes that they expect in their prospective employees.

ಬಣ್ಣ ದ ಕೋಡ್ ಗಳ ಕಾರ್ಡ್

Colour Code

ಅಭ್ಯರ್ಥಿಗಳ ವಿದ್ಯಾರ್ಹತೆಗನುಗುಣವಾಗಿ ಕಲರ್ ಕೋಡಿಂಗ್ ಕಾರ್ಡ್ ಗಳನ್ನು ಉದ್ಯೋಗ ಸಿರಿಯ ದಿನ ವಿತರಿಸಲಾಗುವುದು.  ಇದು ಅವರ ಗುರುತಿಗಾಗಿ ಹಾಗೂ ಸೂಕ್ತ ಕಂಪನಿ ಗಳನ್ನು ಹುಡುಕಲು ಸಹಕರಿಸುತ್ತದೆ.

The colour is the identity of the sector for both students and companies. Each student will get a colour card which becomes their identity and also the key to find the right company. The company also gets a specific colour that can be mapped with their requirement.

ಭಾಗವಹಿಸುವ ಕಂಪನಿಗಳು | Companies Participating