Alvas Nudisiri

ನೋಂದಣಿ
ಆಮಂತ್ರಣ
ಸ್ಥಳ
ಗ್ಯಾಲರಿ
ಸಂಪರ್ಕ
ಆಳ್ವಾಸ್ ನುಡಿಸಿರಿ > Uncategorized > ಆಳ್ವಾಸ್ ನುಡಿಸಿರಿ 2015 ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ

ಆಳ್ವಾಸ್ ನುಡಿಸಿರಿ 2015 ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ

11039275_10153765697810818_8749298198787733760_nರುದ್ರಪಟ್ಟಣ ಕೃಷ್ಣದೀಕ್ಷಿತ ಪದ್ಮನಾಭ – ವಿದ್ವಾನ್ (ಆರ್.ಕೆ. ಪದ್ಮನಾಭ)
ಹಾಸನ ಜಿಲ್ಲೆಯ ರುದ್ರ ಪಟ್ಟಣದಲ್ಲಿ ಸೆಪ್ಟೆಂಬರ್ 26, 1949ರಂದು ಶ್ರೀಮತಿ ಶಾರದಮ್ಮ ಕೃಷ್ಣದೀಕ್ಷಿತರ ಸುಪುತ್ರರಾಗಿ ಜನಿಸಿದ ತಾವು ಸಂಗೀತದಲ್ಲಿ ಆರಂಭಿಕ ವಿದ್ಯಾಭ್ಯಾಸವನ್ನು ವಿದ್ವಾನ್ ನಂಜುಂಡಯ್ಯ ಸ್ವಾಮಿ, ವಿದ್ವಾನ್ ಸೀತಾರಾಮ ಶಾಸ್ತ್ರೀರವರಿಂದ ಪಡೆದು ಸಂಗೀತದಲ್ಲಿ ಉನ್ನತ ಮಾರ್ಗದರ್ಶನವನ್ನು ಪ್ರೊ.ಹೆಚ್.ವಿ. ಕೃಷ್ಣಮೂರ್ತಿಯವರಿಂದ ಪಡೆದಿರುವಿರಿ.
ಭೌತಶಾಸ್ತ್ರದಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪದವಿ ಪಡೆದ ತಾವು ಸ್ಟೇಟ್‍ಬ್ಯಾಂಕ್ ಆಫ್ ಇಂಡಿಯಾದಲ್ಲಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿರುವಿರಿ.
ಗಾನಗಂಧರ್ವರೆಂದೇ ಖ್ಯಾತಿವೆತ್ತ ತಾವು ದೀರ್ಘಸ್ವರಗಳ ನಿಲುಗಡೆ ಸಂಗತಿಗಳಲ್ಲಿ ಸ್ಪಟಿಕದಂತೆ ಸ್ವಷ್ಟ ಅಭಿಪ್ರಾಯ. ತ್ರಿಸ್ಥಾಯಿಯಲ್ಲಿ ಸುಲಲಿತವಾಗಿ ಸಂಚರಿಸುವಂತಹ ಶಾರೀರ ಸೌಲಭ್ಯ ಕೃತಿಗಳ ಸಂಪ್ರಾದಯಿಕ ನಿರೂಪಣೆ ತಮ್ಮ ಅಸದೃಶ್ಯ ಪ್ರತಿಭೆಗೆ ಹಿಡಿದ ಕೈಗನ್ನಡಿ.
ಓರ್ವ ಅಭಿಜಾತ ರಂಗನಟರಾದ ತಾವು ಸಂಗೀತ ಸಾರಸ್ವತ ಲೋಕಕ್ಕೆ ಸುಮಾರು 300ಕ್ಕಿಂತಲೂ ಹೆಚ್ಚು ಕೃತಿಗಳನ್ನು ಪದ್ಮನಾಭದಾಸ ಅಂಕಿತದಲ್ಲಿ ರಚನೆ ಮಾಡಿ ವಾಗ್ಗೆಯಕಾರರಾಗಿದ್ದೀರಿ.
ತರುಣ ಪೀಳಿಗೆಯಲ್ಲಿ ಶಾಸ್ತ್ರೀಯ ಸಂಗೀತವನ್ನು ಪ್ರಚೋದಿಸುವ ಸಲುವಾಗಿ ಪ್ರತಿವರ್ಷ ಬೆಂಗಳೂರಿನ ವಾದಿರಾಜ ಕಲಾಭವನದಲ್ಲಿ ಸಂಗೀತ ಶಿಬಿರವನ್ನು ಆಯೋಜಿಸುತ್ತಾ, ಸಂಗೀತಾಸಕ್ತಿಯ ಉನ್ನತೀಕರಣಕ್ಕೆ ಕೊಡುಗೆ ನೀಡಿದ್ದೀರಿ.
ತಮ್ಮ ಆರಾಧ್ಯದೈವ ಶ್ರೀ ವಾದಿರಾಜ ಸ್ವಾಮಿಗಳ ಕೃತಿ ಆಧಾರಿತ ಸಂಪೂರ್ಣ ಸಮಗ್ರ ಶಾಸ್ತ್ರೀಯ ಸಂಗೀತ ಕಛೇರಿಯನ್ನು ನಡೆಸಿದ ಹೆಗ್ಗಳಿಕೆ ತಮ್ಮದು. ಪೂಜ್ಯ ಗುರುಗಳ ನೂರಕ್ಕೂ ಹೆಚ್ಚು ಕೃತಿಗಳಿಗೆ ರಾಗ ಸಂಯೋಜನೆ ಮಾಡಿ ಮನೆ-ಮನೆಗೆ ಮುಟ್ಟಿಸಿದ ಖ್ಯಾತಿ ತಮ್ಮದು.
ಓರ್ವ ಉತ್ತಮ ಸಮಾಜಸುಧಾರಕರಾದ ತಾವು ಶಾಸ್ತ್ರೀಯ ಸಂಗೀತದಿಂದ ಉಪಯುಕ್ತತೆಯನ್ನು ಮತ್ತು ಆತ್ಮವಿಶ್ವಾಸವನ್ನು ಮೂಡಿಸಿದ್ದೀರಿ. ಗೋಷ್ಠಿಗಾನದಲ್ಲಿ 1000ಕ್ಕೂ ಹೆಚ್ಚು ಶಿಷ್ಯರನ್ನು ಹೊಂದಿ ಪೂಜ್ಯತಾಪಂಕ್ತಿಯಲ್ಲಿ ಗುರುತಿಸಿಕೊಂಡಿದ್ದೀರಿ.
ಬೆಂಗಳೂರಿನಲ್ಲಿ ‘ಶ್ರೀ ಮದ್ವಾದಿರಾಜ ಆರಾಧನಾ ಟ್ರಸ್ಟ್’ ಸ್ಥಾಪಿಸಿ ತಮ್ಮ ಹುಟ್ಟೂರಲ್ಲಿ ವಿಶ್ವವಿಖ್ಯಾತ ಸಪ್ತಸ್ವರ ದೇವತಾ ಧ್ಯಾನಮಂದಿರವನ್ನು ಸ್ಥಾಪಿಸಿದ ಹಿರಿಮೆ ತಮ್ಮದು. ಇದರೊಂದಿಗೆ ವಾದಿರಾಜ ಬಡಾವಣೆ, ನಾದಲೋಕ ಎಂಬ ವಿನೂತನ ಬಡಾವಣೆಗಳನ್ನು ನಿರ್ಮಿಸಿದ್ದೀರಿ.
ಕೇವಲ ಸಂಗೀತ ಮಾತ್ರವಲ್ಲದೆ ಪ್ರಕಾಶನ ಕ್ಷೇತ್ರದಲ್ಲಿ ಸಾಧನೆ ಮೆರೆದ ತಾವು ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಲಭ್ಯವಾಗದಿದ್ದ ಮೈಸೂರು ವಾಸುದೇವಾಚಾರ್ಯರ ಸುಮಾರು 200 ಕೃತಿಗಳನ್ನು, ಧ್ವನಿಸುರುಳಿ ಮತ್ತು ಪುಸ್ತಕರೂಪದಲ್ಲಿ 21 ಸಂಪುಟಗಳಲ್ಲಿ ಶ್ರೀ ವಾದಿರಾಜ ಸ್ವಾಮಿಗಳ ಕುರಿತು ಸಮರ್ಪಣ ಎಂಬ ಶೀರ್ಷಿಕೆಯಲ್ಲಿ 9 ಸಂಪುಟಗಳ ಧ್ವನಿಸುರುಳಿಗಳನ್ನು ಲೋಕರ್ಪಣೆ ಮಾಡಿದ್ದೀರಿ.
ತಮ್ಮ ಸಾಧನೆಯನ್ನು ಗುರುತಿಸಿ ತಮ್ಮನ್ನರಸಿ ಬಂದ ಪ್ರಶಸ್ತಿ ಪುರಸ್ಕಾರಗಳಲ್ಲಿ ಪ್ರಮುಖವಾದವುಗಳೆಂದರೆ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಪುರಂದರ ಪ್ರಶಸ್ತಿ, ನಾಡಪ್ರಭು ಪ್ರಶಸ್ತಿ, ಶ್ರೇಷ್ಠ ಸಂಗೀತಗಾರ ಪ್ರಶಸ್ತಿ, ಸಂಗೀತ ಸೇವಾ ಪ್ರಶಸ್ತಿ ಇತ್ಯಾದಿ.
ಅಪ್ರತಿಮ ಸಂಗೀತ ಸಾಧನೆ, ಮತ್ತು ಸಮಾಜಸೇವೆಗೆ ಅನುಪಮವಾದ ಸೇವೆಯನ್ನು ಪರಿಗಣಿಸಿ ಆರ್.ಕೆ. ಪದ್ಮನಾಭ ಅವರಿಗೆ 2015ರ ಆಳ್ವಾಸ್ ನುಡಿಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತೀದ್ದೇವೆ.