Alvas Nudisiri

ನೋಂದಣಿ
ಆಮಂತ್ರಣ
ಸ್ಥಳ
ಗ್ಯಾಲರಿ
ಸಂಪರ್ಕ
ಆಳ್ವಾಸ್ ನುಡಿಸಿರಿ > Uncategorized > ಆಳ್ವಾಸ್ ನುಡಿಸಿರಿ 2015 ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ

ಆಳ್ವಾಸ್ ನುಡಿಸಿರಿ 2015 ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ

ಸೈಯದ್ ಸಲ್ಲಾವುದ್ದೀನ್ ಪಾಷಾ

ಸೈಯದ್ ಸಲ್ಲಾವುದ್ದೀನ್ ಪಾಷಾರವರು 30 ವರ್ಷಗಳಿಂದ ವಿಕಲಚೇತನರಿಗೆ ನೃತ್ಯವನ್ನು ಕಲಿಸುತ್ತಾ ಕಲಾ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ಸ್ವತಃ ಗಾಲಿಕುರ್ಚಿಯ ಮೇಲೆ ಗಂಟೆಗಟ್ಟಲೆ ಕುಳಿತು ವಿಕಲಚೇತನರಿಗೆ ಶಾಸ್ತ್ರೀಯ ನೃತ್ಯಕಲೆಗಳನ್ನು ಕಲಿಸಿ ಅವರ ಕಲೆಯನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವೇದಿಕೆಯ ಮೇಲೆ ಪ್ರದರ್ಶಿಸಿ ಅವರಿಗೆ ಸಮಾಜದಲ್ಲಿ ಸಮಾನತೆ, ಗೌರವ ಮತ್ತು ಸಬಲೀಕರಣಗಳನ್ನು ದೊರಕಿಸಿವುದಕ್ಕಾಗಿ ತಮ್ಮ ಜೀವನವನ್ನು ಸಮರ್ಪಿಸಿದ್ದಾರೆ. ಇವರು ವಿಕಲಚೇತನರಿಗಾಗಿ ಗಾಲಿಕುರ್ಚಿಯ ಮೇಲೆ ಆವಿಷ್ಕಾರ ಮಾಡಿ ಸಂಯೋಜಿಸಿರುವ ‘ರಾಮಾಯಣ ಆನ್ ವೀಲ್ಸ್’ ‘ಭಗವದ್ಗೀತಾ ಆನ್ ವೀಲ್ಸ್’ ‘ಯೋಗ ಆನ್ ವೀಲ್ಸ್’ ‘ಭರತನಾಟ್ಯ ಆನ್ ವೀಲ್ಸ್’ ‘ಸೂಫಿ ಆನ್ ವೀಲ್ಸ್’ ‘ಫ್ರೀಡಂ ಆನ್ ವೀಲ್ಸ್’ ‘ಮಿರಾಕಲ್ಸ್ ಆನ್ ವೀಲ್ಸ್’ ಹೀಗೆ ನೂರಕ್ಕೂ ಹೆಚ್ಚು ನೃತ್ಯ ರೂಪಕಗಳು ಮತ್ತು ಹತ್ತು ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ವಿಶ್ವದಾದ್ಯಾಂತ ನೀಡಿ ಲಿಮ್ಕಾ ಬುಕ್ ಆಫ್ ರೆಕಾಡ್ರ್ಸ್ ಮತ್ತು ಗಿನ್ನಿಸ್ ವಲ್ರ್ಡ್ ರೆಕಾರ್ಡ್‍ನಲ್ಲಿ ವಿಶ್ವದಾಖಲೆ ಸ್ಥಾಪಿಸಿದ್ದಾರೆ.
ಸೈಯದ್ ಸಲಾವುದ್ದೀನ್ ಪಾಷರವರು ಬಾಲ್ಯದಿಂದ ಕನ್ನಡ, ಸಂಸ್ಕøತ, ವೇದ, ಉಪನಿಷತ್, ರಾಮಾಯಣ, ಮಹಾಭಾರತ, ಯೋಗ ಶಾಸ್ತ್ರಗಳ ಅಧ್ಯಯನವನ್ನು ಮಾಡಿರುವ ಇವರು ತಮ್ಮ ನೃತ್ಯ ಕಾರ್ಯಕ್ರಮಗಳಲ್ಲಿ ಬಸವಣ್ಣ, ಅಲ್ಲಮಪ್ರಭು, ಗಾನಯೋಗಿ ಪಂಚಾಕ್ಷರಿ ಗವಾಯಿ, ವಿಜಯನಗರದ ಶ್ರೀ ಕೃಷ್ಣದೇವರಾಯ ಮತ್ತು ಭರತ, ಬಾಹುಬಲಿ, ರಾಮ, ಕೃಷ್ಣ, ಹನುಮಂತ, ಶಿವ ಮುಂತಾದ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ರಾಷ್ಟ್ರಕವಿ ಕುವೆಂಪು ಅವರ ಸಮ್ಮುಖದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಕೃತಿ ‘ಶ್ರೀ ರಾಮಾಯಣದರ್ಶನಂ’ ನೃತ್ಯರೂಪಕ ಪ್ರದರ್ಶನ ನೀಡಿ ಅವರ ಅಶೀರ್ವಾದ ಪಡೆದು ಧನ್ಯರಾಗಿದ್ದಾರೆ. ಅಮೇರಿಕಾದ ಕಾರ್ನೆಲ್ ವಿಶ್ವವಿದ್ಯಾನಿಲಯದಲ್ಲಿ ಅಂತರರಾಷ್ಟ್ರೀಯ ವಿದ್ವಾಂಸರಾಗಿ ಮತ್ತು ಫಿನ್‍ಲ್ಯಾಂಡ್ ದೇಶದ ಸಾಂಸ್ಕøತಿಕ ವಿಭಾಗದಲ್ಲಿ ಅಂಗವಿಕಲರ ಕಾರ್ಯಕ್ರಮಗಳ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಭಾರತದ ಪೂರ್ವ ರಾಷ್ಟ್ರಪತಿ ಡಾ| ಎ.ಪಿ.ಜೆ. ಅಬ್ದುಲ್ ಕಲಾಂ, ಶ್ರೀಮತಿ ಪ್ರತಿಭಾ ದೇವಿಸಿಂಗ್ ಪಾಟೀಲ್, ಪ್ರಸಕ್ತ ರಾಷ್ಟ್ರಪತಿ ಶ್ರೀಯುತ ಪ್ರಣವ್ ಮುಖರ್ಜಿ, ಪೂರ್ವ ಪ್ರಧಾನ ಮಂತ್ರಿ ಡಾ. ಮನಮೋಹನ್‍ಸಿಂಗ್ ಮತ್ತು ಶ್ರೀಮತಿ ಸೋನಿಯಾಗಾಂಧಿ ಹಾಗೂ ಮಲೇಶಿಯಾದ ಪೂರ್ವ ಪ್ರಧಾನಮಂತ್ರಿ ಶ್ರೀಯುತ ಮಹತೀರ್ ಬಿನ್ ಮಹಮದ್, ಇಂಗ್ಲೆಂಡಿನ ಹೌಸ್ ಆಫ್ ಕಾಮನ್ಸ್‍ನಲ್ಲಿ ಪ್ರತಿಷ್ಠಿತ ಗಣ್ಯರ ಸಮ್ಮುಖದಲ್ಲಿ ತಮ್ಮ ಕಲಾ ಪ್ರದರ್ಶನ ನೀಡಿ ಕಲೆಯ ಉತ್ಕøಷ್ಟತೆಯನ್ನು ಮೆರೆದಿದ್ದಾರೆ.
ವಿಕಲಚೇತನರಿಗೆ ಕಲೆಯ ಮೂಲಕ ಸಮಾಜದಲ್ಲಿ ಘನತೆ, ಸಮಾನತೆ, ಸಬಲೀಕರಣಕ್ಕಾಗಿ ಪೂರ್ವ ರಾಷ್ಟ್ರಪತಿ ಶ್ರೀಮತಿ ಪ್ರತಿಭಾದೇವಿ ಸಿಂಗ್ ಪಾಟೀಲರಿಂದ 2007ರಲ್ಲಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಸಂಸ್ಕøತಿ ಫೌಂಡೇಶನ್ ಅವರಿಂದ 2010ರಲ್ಲಿ ಕರ್ಮವೀರ ಪುರಸ್ಕಾರವನ್ನು 2001ರಲ್ಲಿ ಕರ್ನಾಟಕ ರಾಜ್ಯಪಾಲರಿಂದ ಪ್ರಶಸ್ತಿ ಪಡೆದಿದ್ದಾರೆ.
ಹೀಗೆ ನೃತ್ಯ ಶಿಕ್ಷಣ, ಸಂಯೋಜನೆ ಮತ್ತು ವಿಕಲಚೇತನರಿಗೆ ಸಮಾನತೆ ಮತ್ತು ಸಬಲೀಕರಣಕ್ಕಾಗಿ ಸಲ್ಲಿಸಿದ ಅನುಪಮವಾದ ಸೇವೆಯನ್ನು ಪರಿಗಣಿಸಿ ಸೈಯದ್ ಸಲ್ಲಾವುದ್ದೀನ್ ಪಾಷಾ ಅವರಿಗೆ 2015ರ ಆಳ್ವಾಸ್ ನುಡಿಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತೀದ್ದೇವೆ.