Alvas Nudisiri

ನೋಂದಣಿ
ಆಮಂತ್ರಣ
ಸ್ಥಳ
ಗ್ಯಾಲರಿ
ಸಂಪರ್ಕ
ಆಳ್ವಾಸ್ ನುಡಿಸಿರಿ > Uncategorized > ಆಳ್ವಾಸ್ ನುಡಿಸಿರಿ 2015 ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ

ಆಳ್ವಾಸ್ ನುಡಿಸಿರಿ 2015 ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ

ಡಾ. ಬಿ.ಎನ್. ಸುಮಿತ್ರಾಬಾಯಿ

ಕನ್ನಡ ಸಾಹಿತ್ಯ ಲೋಕದಲ್ಲಿ ಸ್ತ್ರೀ ಸಂವೇದನೆ, ಸ್ತ್ರೀ ಪರವಾದ ಸಾಂಸ್ಕøತಿಕ ವಾಗ್ವಾದಗಳಲ್ಲಿ ಅತ್ಯಂತ ಕ್ರಿಯಾಶೀಲವಾಗಿ ತೊಡಗಿಸಿಕೊಂಡ ವಿಶಿಷ್ಟ ಹೆಸರು ಡಾ. ಬಿ.ಎನ್. ಸುಮಿತ್ರಾಬಾಯಿ. 1950 ಅಕ್ಟೋಬರ್ 15ರಂದು ಮೈಸೂರಿನಲ್ಲಿ ಜನಿಸಿ ಸಂಸ್ಕøತ ಮತ್ತು ಇಂಗ್ಲೀಷ್‍ನಲ್ಲಿ ಎಂ.ಎ ಪದವಿ ಪಡೆದಿರುವ ಇವರು ಜೈನಶಾಸ್ತ್ರ ಮತ್ತು ಪ್ರಾಕೃತದಲ್ಲಿ ಪಿ.ಎಚ್.ಡಿ ಪದವಿಯನ್ನು ಪಡೆದಿದ್ದಾರೆ.
ಹಾಸನದ ಎ.ಎ ಕಾಂತಮ್ಮ ಮಹಿಳಾ ಕಾಲೇಜಿನಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿ ಸುಮಾರು 36ವರ್ಷಗಳ ಉಪನ್ಯಾಸ ಜೀವನದಲ್ಲಿ ಭೋದನೆ, ಸಂಶೋಧನೆ ಮತ್ತು ಪ್ರಕಟಣೆಯಲ್ಲಿ ಸಾರ್ಥಕತೆ ಕಂಡವರು. ‘ ಜಿನಸೇನನ ಹರಿವಂಶ ಪುರಾಣ: ಒಂದು ಅಧ್ಯಯನ’ ಅನ್ನುವುದು ಇವರ ಅತ್ಯಂತ ವಿದ್ವತ್ ಪೂರ್ಣವಾದ , ಸಂಶೋಧನಾ ಮಹಾಪ್ರಬಂಧ. ಸಂಸ್ಕøತ ಮಹಾಕಾವ್ಯಗಳ ಕುರಿತಾದ ಇವರ ನೂರಾರು ಸಂಶೋಧನಾ ಲೇಖನಗಳು ಇಂಗ್ಲೀಷ್ ಮತ್ತು ಕನ್ನಡ ಭಾಷೆಯಲ್ಲಿ ಪ್ರಕಟವಾಗಿ ಉನ್ನತ ಸಂಶೋಧನೆಗೆ ದಾರಿದೀಪವಾಗಿದೆ.

‘Jaina Mahabharata’ in association with Dr. R.J. Zydeubos , Essay on the Mahabharat to New York University. “ Feminine Divinitis in Jainisum from Nationalisum to Feminisum- a serch for Identity in Womens writing in kannada” for Warriar University , through British Book council, London ಇವುಗಳು ಮಹತ್ವದವುಗಳು

ಮಹಿಳಾ ಅಧ್ಯಯನ, ಸ್ತ್ರೀವಾದಿ ವಿಮರ್ಶೆ ಮತ್ತ ಸಾಹಿತ್ಯ ವಿಮರ್ಶೆಯಲ್ಲಿ ಅತ್ಯಂತ ಆಸಕ್ತಿಯಿಂದ ತೊಡಗಿಸಿಕೊಂಡ ಇವರು ಹಲವಾರು ಗ್ರಂಥ ಸಂಪುಟಗಳನ್ನು ಮತ್ತು ಪುಸ್ತಕಗಳನ್ನು ಹೊರತಂದಿದ್ದಾರೆ. ‘ಸ್ವಾತಂತ್ರೋತ್ತರ ಕನ್ನಡ ಸಾಹಿತ್ಯ ಮತ್ತು ಸಂಸ್ಕøತಿ, ಧರ್ಮ ವಿಷಯಕ ವಿಶ್ವಕೋಶ, ಡಾ. ಅನುಪಮಾ ಅಭಿನಂದನ, ಸುರಗಿ, ಹಣತೆ, ಶಬ್ದಸಾಗರ ಹೀಗೆ 14 ಗ್ರಂಥ ಸಂಪುಟಗಳು ಹಾಗೂ ವಿಮೋಚನೆಯೆಡೆಗೆ, ಸ್ತ್ರೀವಾದಿ ವಿಮರ್ಶೆ, ಬ್ರಹ್ಮಪುತ್ರದ ಕಣಿವೆಯಲ್ಲಿ, ನಂಜನಗೂಡು ತಿರುಮಲಾಂಭ, ತ್ರಿವೇಣಿ ಕಥನವಾಚಿಕೆ, ಪಾಶ್ಚಾತ್ಯ ಸ್ತ್ರೀವಾದಿ ತತ್ವಗಳು, ವೈಷ್ಣವ ಕವಯತ್ರಿಯರು, ಮಾತೃಆರಾಧನೆ, ವಿಚಯ ಹೀಗೆ 25 ಕೃತಿಗಳು ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದೆ. ಹತ್ತಾರು ರಾಷ್ಟ್ರೀಯ- ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸಿರುವ ಇವರು ಅಖಿಲ ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರು, ಜಾಗೃತಿ ಮಹಿಳಾ ಅಧ್ಯಯನ, ಅಚಲ, ಮಾನಸ ಹೀಗೆ ಸಾಂಸ್ಕøತಿಕ ಮತ್ತು ಮಹಿಳಾ ಸಂಘಟನೆ ಹಾಗೂ ಪತ್ರಿಕೆಗಳಲ್ಲಿ ತಮ್ಮನ್ನು ಜವಾಬ್ದಾರಿಯುತವಾಗಿ ತೊಡಗಿಸಿಕೊಂಡವರು. ಕರ್ನಾಟಕ ಸಾಹಿತ್ಯ ಅಕಾಡೆಮಿ, ಜಿ,ಎಸ್.ಎಸ್. ಪ್ರಶಸ್ತಿ, ಅನುಪಮಾ ಪ್ರಶಸ್ತಿ , ಬಿ.ಎಂ.ಇನಾಂದರ ಪ್ರಶಸ್ತಿ, ಬಿ ಎಂ. ಶ್ರೀ ಪ್ರಶಸ್ತಿಗಳಿಂದ ಪುರಸ್ಕøತರು.
ಹೀಗೆ ಸಾಹಿತ್ಯ-ಸಂಶೋಧನೆ ಮಹಿಳಾಪರ ಸಂವೇದನೆ ಸಂಘಟನೆಗಳ ಕ್ಷೇತ್ರಗಳಲ್ಲಿ ನಿಮ್ಮ ಈ ಅನುಪಮ ಸೇವೆಯನ್ನು ಗುರುತಿಸಿ ಆಳ್ವಾಸ್ ನುಡಿಸಿರಿ-2015ರ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದ್ದೇವೆ.