ನಡೆದು ಬಂದ ದಾರಿ
ಹತ್ತು ವರ್ಷಗಳ ಹಿಂದೆ ಆಳ್ವಾಸ್ ನುಡಿಸಿರಿ, ೨೦ ವರ್ಷಗಳ ಹಿಂದ ಆಳ್ವಾಸ್ ವಿರಾಸತ್ ಕಾರ್ಯಕ್ರಮಗಳನ್ನು ಹುಟ್ಟು ಹಾಕುವಾಗಲೇ ನಮ್ಮಲ್ಲಿ ನಿರ್ಧಿಷ್ಠ ಯೋಚನೆಗಳಿದ್ದುವು. ಯಾವುದೇ ಕಾರ್ಯಗಳನ್ನು ಪ್ರಾರಂಭಿಸುವುದು ಸುಲಭ, ಮುಂದುವರಿಸಿಕೊಂಡು ಹೋಗುವುದು ಕಷ್ಟ. ಆರಂಭಶೂರ ತನದಲ್ಲಿ ಹೊರಟು ಬಿಟ್ಟರೆ ಗುರಿ ಮುಟ್ಟುವುದು ಸಾಧ್ಯವಾಗುವುದಿಲ್ಲ. ಮಾಡಿದ ಕೆಲಸಗಳು, ಯೋಚಿಸಿದ ಯೋಚನೆಗಳು ಸುದೀರ್ಘ. ಸೂರ್ಯ-ಚಂದ್ರರಿರುವಷ್ಟು ಕಾಲ ಮುನ್ನಡೆಯಬೇಕೆಂದು ನಮ್ಮ ಆಸೆ. ಅದಕ್ಕಾಗಿ ಸನ್ಮಿತ್ರರ ಬಳಗದಲ್ಲಿ ಯೋಚಿಸಿ, ಚಿಂತಿಸಿ, ಸ್ಫಷ್ಟ ನಿರ್ಧಾರಕ್ಕೆ ಬಂದು ಕಾರ್ಯೋನ್ಮುಖರಾಗಿದ್ದೆವು. ಕನ್ನಡದ ಮೇಲಿನ ಪ್ರೀತಿ ಕೇವಲ ಒಂದು ದಿನದ್ದಾದರೆ ಏನು ಪ್ರಯೋಜನ?
ಮುಂದೆ ಓದಿ